ಜ.12ರಂದು ಬೆಂಗಳೂರಲ್ಲಿ ಝಾಕೀರ್‌ ಹುಸೇನ್‌ ತಬಲಾ ಕಛೇರಿ

ಬೆಂಗಳೂರು : ತಬಲಾ ಮೋಡಿಗಾರ ಉಸ್ತಾದ್‌ ಝಾಕೀರ್‌ ಹುಸೇನ್‌ ಬೆಂಗಳೂರಿಗೆ ಬರುತ್ತಿದ್ದಾರೆ. ಜನವರಿ 12ರಂದು ಅವರ ಕಛೇರಿ.

ಸಂಜೋಗ್‌ ಕಲಾ ಸಂಸ್ಥೆಯ ಹಾಗೂ ಗರ್ವ ಧಾರಾವಾಹಿ ಖ್ಯಾತಿಯ ಪ್ರವೀಣ್‌ ಗೋಡ್ಖಿಂಡಿ ಮತ್ತು ಗಾಯಕಿ ಎಂ.ಡಿ.ಪಲ್ಲವಿ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ- ಚೌಡಯ್ಯ ಸ್ಮಾರಕ ಭವನ. 2 ತಾಸಿಗೂ ಹೆಚ್ಚು ಕಾಲ ಝಾಕೀರ್‌ ಸಂಗೀತ ಸಹೃದಯರನ್ನು ರಂಜಿಸಲಿದ್ದಾರೆ.

ಬಾನ್ಸುರಿ ಮಹಾವಿದ್ಯಾಲಯವನ್ನು ಸ್ಥಾಪಿಸಲು ನಿಧಿ ಸಂಗ್ರಹಿಸುವ ಯೋಜನೆಗಳಲ್ಲಿ ಈ ಕಾರ್ಯಕ್ರಮವೂ ಒಂದು. ಇದರಲ್ಲಿ ಸಂಗ್ರಹವಾಗುವ ಹಣವನ್ನು ಮಕ್ಕಳು ಹಾಗೂ ಯುವಕರಿಗೆ ಬಾನ್ಸುರಿ ತರಪೇತಿ ನೀಡಲು ಬಳಸಲಾಗುವುದು. ಖ್ಯಾತ ಕೊಳಲು ವಾದಕ ಹಾಗೂ ಗರ್ವ ಧಾರಾವಾಹಿಯ ಆರು ಹಿತವರು ನನಗೆ... ಹಾಡಿನ ಮೂಲಕ ಮನೆಮಾತಾಗಿರುವ ವೆಂಕಟೇಶ್‌ ಗೋಡ್ಖಿಂಡಿ ಬಾನ್ಸುರಿ ತರಪೇತಿ ನೀಡುವರು ಎಂದು ಪ್ರವೀಣ್‌ ಗೋಡ್ಖಿಂಡಿ ಹೇಳಿದರು. ಅಂದಹಾಗೆ, ಈ ಕಾರ್ಯಕ್ರಮದ ಪ್ರಾಯೋಜಕರು ತಾಜ್‌ ಮಹಲ್‌ ಟೀ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+