ಸಂಪುಟ ವಿಸ್ತರಣೆ : ಟಿ.ಜಾನ್‌ಗೆ ಮತ್ತೆ ಒಲವು ತೋರಿದ ಕೃಷ್ಣ
ಬೆಂಗಳೂರು: ಒಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರು, ಇನ್ನಿಬ್ಬರು ರಾಜ್ಯ ದರ್ಜೆಯ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ 26 ತಿಂಗಳುಗಳಷ್ಟು ಹಳೆಯದಾದ ಮಂತ್ರಿ ಮಂಡಲವನ್ನು ಸೋಮವಾರ ವಿಸ್ತರಿಸಿದರು.
ಸೋಮವಾರ ಮಧ್ಯಾಹ್ನ 12.30 ಕ್ಕೆ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿ.ಎಸ್. ಪಾಟೀಲ್ ಸಾಸನೂರ್(ಬಿಜಾಪುರ), ರಾಜಾ ಅಮರೇಶ್ವರ ನಾಯಕ್ (ರಾಯಚೂರು) ಹಾಗೂ ಟಿ.ಜಾನ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪಾಟೀಲ್ ಸಾಸನೂರ್ ಅವರು ಕ್ಯಾಬಿನೆಟ್ ದರ್ಜೆಯ ಸಚಿವರಾದರೆ, ಉಳಿದಿಬ್ಬರು ರಾಜ್ಯ ದರ್ಜೆಯ ಸಚಿವರು. ನೂತನ ಸಚಿವರಿಗೆ ಅಧಿಕಾರ ಹಾಗೂ ಗೋಪ್ಯತೆಯ ಪ್ರತಿಜ್ಞಾ ವಿಧಿಯನ್ನು ರಾಜ್ಯಪಾಲೆ ವಿ.ಎಸ್. ರಮಾದೇವಿ ಬೋಧಿಸಿದರು.
ಹೊಸ ಸಚಿವರ ಸೇರ್ಪಡೆಯಲ್ಲದೆ, ಕೃಷಿ ಮಾರುಕಟ್ಟೆ ಸಚಿವರಾದ ಆರ್.ಬಿ. ತಿಮ್ಮಾಪುರ ಹಾಗೂ ವಾರ್ತಾ ಸಚಿವ ಎಂ. ಶಿವಣ್ಣ ಅವರು ಕ್ಯಾಬಿನೆಟ್ ದರ್ಜೆಗೆ ಬಡ್ತಿ ಪಡೆದಿದ್ದಾರೆ. ಸೋಮವಾರದ ಮಂತ್ರಿ ಮಂಡಲ ವಿಸ್ತರಣೆಯಾಂದಿಗೆ ಕೃಷ್ಣ ಅವರ ಸಂಪುಟ ಸದಸ್ಯರ ಸಂಖ್ಯೆ 44 ಕ್ಕೆ ಏರಿದೆ.
ಬಾಲಂಗೋಚಿ : ಗುಜರಾತ್ ಭೂಕಂಪವನ್ನು ಕ್ರೆೃಸ್ತ ಧರ್ಮೀಯರ ಮೇಲೆ ನಡೆಸಿದ ಹಲ್ಲೆಗೆ ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications