ಸಾಗರದ ಗೋದಾಮಿಗೆ ಬೆಂಕಿ: 30 ಲಕ್ಷ ರು. ಬೆಲೆ ಅಡಿಕೆ ಕರಕಲು
ಸಾಗರ : ಅಡಿಕೆ ಮಂಡಿಯ ಗೋದಾಮಿಗೆ ಬೆಂಕಿ ಬಿದ್ದು, 525 ಚೀಲ ಅಡಿಕೆ ಸುಟ್ಟು ಕರಕಲಾಗಿದೆ.
ಎಪಿಎಂಸಿಯಲ್ಲಿರುವ ಶ್ರೀಕಾಂತ್ ಹೆಗಡೆ ಅಡಿಕೆ ಮಂಡಿಗೆ ಶನಿವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಕಾರಣ ಈ ಅವಘಡ ಸಂಭವಿಸಿದೆ. ಎಪಿಎಂಸಿ ಆವರಣದಲ್ಲಿದ್ದ ಒಣಹುಲ್ಲಿಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿ, ಅದು ಗೋದಾಮಿಗೂ ಹರಡಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ. ಸುಟ್ಟು ಕರಕಲಾಗಿರುವ ಅಡಿಕೆಯ ಬೆಲೆ 30 ಲಕ್ಷದ 11 ಸಾವಿರ 250 ರುಪಾಯಿ. ಬೆಂಕಿ ಹೊತ್ತಿಕೊಳ್ಳಲು ಮೂಲ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications