ಉಗ್ರ ಭಯ : ಬೆಂಗಳೂರು ಕ್ರಿಕೆಟ್ ಟೆಸ್ಟ್‌ಗೆ ಬಿಗಿ ಪೊಲೀಸ್ ಪಹರೆ
ಬೆಂಗಳೂರು : ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 19ರಂದು ನಗರದಲ್ಲಿ ಪ್ರಾರಂಭವಾಗಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
‘ನಾವು ಯಾವುದೇ ಅನಾಹುತ ಘಟಿಸಲು ಅವಕಾಶ ಮಾಡಿಕೊಡುವುದಿಲ್ಲ ’ ಎಂದು ರಾಜ್ಯ ಡಿಜಿಪಿ ವಿವಿ ಭಾಸ್ಕರ್ ಹೇಳಿದ್ದಾರೆ. ಅವರು ಸಂಸತ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾಡಲಾಗಿರುವ ಸುರಕ್ಷಾ ವ್ಯವಸ್ಥೆಯ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಡಿಸೆಂಬರ್ 19ರಂದು ನಡೆಯುವ ಟೆಸ್ಟ್‌ನಲ್ಲಿ ನಮ್ಮ ಬಗ್ಗೆ ದ್ವೇಷ ಹೊಂದಿರುವ ರಾಷ್ಟ್ರಗಳು ಭಾಗವಹಿಸುತ್ತಿಲ್ಲವಾದ್ದರಿಂದ ಅನಾಹುತ ಘಟಿಸುವ ಸಂಭವ ತೀರಾ ಕಡಿಮೆ. ಆದರೂ ಟೆಸ್ಟ್ ನೋಡಲು ದೊಡ್ಡ ಜನಸಮೂಹ ಒಂದೆಡೆ ಸೇರುವುದರಿಂದ ಭಧ್ರತೆ ಒದಗಿಸುವುದು ತೀರಾ ಅವಶ್ಯಕ ಎಂದು ಭಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications