ರಾಷ್ಟ್ರೀಯ ಜ್ಯೋತಿಷ್ಯ ಸಮ್ಮೇಳನದ ಅಧ್ಯಕ್ಷರಾಗಿ ಕಲ್ಯ ಗೋಪಾಲ ಭಟ್ಟರು
ಉಡುಪಿ: ವೇದ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೌಢಿಮೆಯಿರುವ ವಿದ್ವಾಂಸ ಕಲ್ಯ ಗೋಪಾಲ ಭಟ್ಟರು ಉಡುಪಿ ರಾಜಾಂಗಣದಲ್ಲಿ ನಡೆಯುವ ಅಖಿಲ ಭಾರತ ಜ್ಯೋತಿಷ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕನ್ನಡ, ಹಿಂದಿ, ತುಳು, ಸಂಸ್ಕೃತ ಹಾಗೂ ಮಲಯಾಳಂ ಭಾಷೆಗಳ ಸಾಹಿತ್ಯ ಜ್ಞಾನ ಹೊಂದಿರುವ ಗೋಪಾಲ ಭಟ್ಟರು, ಕೇರಳದ ತ್ರಿಪುಣಿತ್ತುರ ಮತ್ತು ತಿರುವನಂತಪುರದಲ್ಲಿ ಸಂಸ್ಕೃತ, ವೇದ, ಜ್ಯೋತಿಷ್ಯ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಪೌರೋಹಿತ್ಯ ಮತ್ತು ಹೋಮಿಯೋಪತಿ ವೈದ್ಯಕೀಯ ಕ್ಷೇತ್ರದಲ್ಲಿಯೂ ಭಟ್ಟರು ಜ್ಞಾನ ಗಳಿಸಿಕೊಂಡಿದ್ದಾರೆ.
ಭೂತ ಕಲ್ಪ, ಸ್ತೋತ್ರ ಸಿಂಧೂರ, ದ್ವಾದಶ ಸ್ತೋತ್ರ ವ್ಯಾಖ್ಯಾನ, ದಶಾವತಾರ ಸ್ತುತಿ ವ್ಯಾಖ್ಯಾನ, ಮುಹೂರ್ತ ಸನ್ಮಾರ್ಗ ದರ್ಶಿನಿ ಮುಂತಾದ ಗ್ರಂಥಗಳನ್ನು ರಚಿಸಿರುವ 70ರ ಹರೆಯದ ಭಟ್ಟರು, ಡಿಸೆಂಬರ್ 29 ಹಾಗೂ 30ರಂದು ಉಡುಪಿಮಠದ ರಾಜಾಂಗಣದಲ್ಲಿ ನೆಡವ ಜ್ಯೋತಿಷ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications