ಸಾರ್ಕ್ ಬರಹಗಾರರ ಮೇಳಕ್ಕೆ ರಾಜ್ಯದ ಇಬ್ಬರು ಸಾಹಿತಿಗಳು
ಬೆಂಗಳೂರು : ದೆಹಲಿಯಲ್ಲಿ ಡಿಸೆಂಬರ್ 13ರಂದು ಆರಂಭವಾಗುವ ಸಾರ್ಕ್ ಬರಹಗಾರರ ಸಮ್ಮೇಳನಕ್ಕೆ ರಾಜ್ಯದ ಇಬ್ಬರು ಕನ್ನಡ ಸಾಹಿತಿಗಳು ಆಯ್ಕೆಯಾಗಿದ್ದಾರೆ.
ಕವಯಿತ್ರಿ ಪ್ರತಿಭಾನಂದ ಕುಮಾರ್ ಹಾಗೂ ಸಾಹಿತಿ ಎಚ್. ಎಸ್. ಶಿವಪ್ರಕಾಶ್, ಸಾರ್ಕ್ ಸಮ್ಮೇಳನಕ್ಕೆ ತೆರಳಲಿದ್ದಾರೆ. 3 ದಿನಗಳ ಕಾಲ ನಡೆಯುವ ಸಮ್ಮೇಳನವನ್ನು ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಉದ್ಘಾಟಿಸುವರು. 9 ಗೋಷ್ಠಿಗಳಿರುವ ಸಮಾವೇಶದಲ್ಲಿ ಲಿಂಗ ತಾರತಮ್ಯ, ಸಾಮೂಹಿಕ ಅನ್ಯಾಯ ಮತ್ತು ಪ್ರತಿಭಟನೆಯ ಬಗೆಗೆ ಗಣ್ಯರು ತಮ್ಮ ವಿಚಾರ ಮಂಡಿಸುವರು.
ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ್, ಶ್ರೀಲಂಕಾ, ಭೂತಾನ್ ಮತ್ತು ಮಾಲ್ಡಿವ್ಸ್ ದೇಶಗಳ ಸಾಹಿತಿಗಳು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸಾಹಿತಿಗಳ ಗುಂಪಿನಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತೆ ಮಹಾಶ್ವೇತಾ ದೇವಿ, ಬೂಕರ್ ಪುರಸ್ಕೃತೆ ಅರುಂಧತಿ ರಾಯ್, ಸೀತಾಕಾಂತ್ ಮಹಾಪತ್ರ, ಕೃಷ್ಣಾ ಸೋಬ್ತಿ, ಗಣೇಶ್ ದೇವಿ, ಮಣಿಶಂಕರಣ ಆಯ್ಯರ್, ಜಾವೇದ್ ಅಖ್ತರ್, ಮಾರ್ಕ್ ಟುಲಿ, ಮೃಣಾಲ್ ಪಾಂಡೆ ಸೇರಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications