ಮಂಗಳೂರು ವಿವಿ ಕುಲ ಸಚಿವರಾಗಿ ಪ್ರೊ.ಬಿ.ಎ. ವಿವೇಕ ರೈ
ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ ಕುಲಸಚಿವ(ರೆಜಿಸ್ಟ್ರಾರ್) ರಾಗಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಕಲಾ ವಿಭಾಗದ ಡೀನ್ ಆಗಿರುವ ಪ್ರೊ. ಬಿ.ಎ. ವಿವೇಕ ರೈ ಅವರನ್ನು ನೇಮಕ ಮಾಡಲಾಗಿದೆ.
ಮಂಗಳೂರು ವಿಶ್ವ ವಿದ್ಯಾಲಯ ಸ್ಥಾಪನೆಯಾದ ದಿನಗಳಿಂದಲೇ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರೈ ಅವರು ಕನ್ನಡ ಹಾಗೂ ತುಳು ಭಾಷಾ ಅಧ್ಯಯನಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜರ್ಮನಿ, ಸ್ವಿಟ್ಜರ್‌ಲೆಂಡ್ ಮತ್ತು ಫಿನ್‌ಲೆಂಡ್ ದೇಶಗಳ ವಿಚಾರಸಂಕಿರಣಗಳಲ್ಲಿ ಭಾಷಾ ಅಧ್ಯಯನಕ್ಕೆ ಸಂಬಂಧಿಸಿ ಪ್ರಬಂಧಗಳನ್ನು ಮಂಡಿಸಿದ ಅನುಭವ ರೈಗಳದು.
ವಿಶ್ವವಿದ್ಯಾಲಯದ ವಿವಿಧ ಘಟಕಗಳ ಸದಸ್ಯರಾಗಿ, ಸಮಿತಿಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ವಿವೇಕ ರೈಗಳಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ರಾಜ್ಯ ತುಳು ಅಕಾಡೆಮಿಯ ಮೊದಲ ಅಧ್ಯಕ್ಷರೆಂಬ ಅಗ್ಗಳಿಕೆಯೂ ವಿವೇಕ ರೈ ಅವರದು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications