ಆಹಾರ ಸಂಸ್ಕರಣೆಯಲ್ಲಿ 10 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ

ಬೆಂಗಳೂರು : ಆಹಾರ ಸಂಸ್ಕರಣೆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ 10 ಸಾವಿರ ಕೋಟಿ ರುಪಾಯಿ ಬಂಡವಾಳ ಹೂಡುವುದಾಗಿ ಕರ್ನಾಟಕ ಸರ್ಕಾರ ಪ್ರಕಟಿಸಿದೆ.

ಬುಧವಾರ ಮುಕ್ತಾಯವಾದ 5 ದಿನಗಳ ಅವಧಿಯ ಬೆಂಗಳೂರು ಕೃಷಿ ಆಹಾರ ಮೇಳ ಘೋಷಣೆ ಪತ್ರವನ್ನು ಗುರುವಾರ ಬಿಡುಗಡೆ ಮಾಡಿ, ಕೃಷಿ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದರು. ಅವರ ಜೊತೆಯಲ್ಲಿ ತೋಟಗಾರಿಕೆ ಸಚಿವ ಕಾಗೋಡು ತಿಮ್ಮಪ್ಪ ಕೂಡ ಇದ್ದರು. ಕೃಷಿ ಕ್ಷೇತ್ರದ ಪ್ರಗತಿಯ ಪ್ರಮಾಣ ಈಗ ಶೇ.2ರಷ್ಟಿದೆ. ಅದನ್ನು ಪ್ರತಿಶತ 10ರಷ್ಟಕ್ಕೆ ಹೆಚ್ಚಿಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಬಂಡವಾಳ ಹೂಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವರು ಹೇಳಿದರು.

ಕರ್ನಾಟಕದ ಮಾದರಿಯ ಗುತ್ತಿಗೆ ಆಧಾರಿತ ತೋಟಗಾರಿಕೆ ವ್ಯವಸ್ಥೆಯನ್ನು ದೇಶದ ಬೇರೆ ರಾಜ್ಯಗಳಲ್ಲೂ ಯಶಸ್ವಿಯಾಗಿ ಜಾರಿಗೆ ತರಬೇಕು. ಅರಣ್ಯ ಉತ್ಪನ್ನಗಳನ್ನು ತೋಟಗಾರಿಕೆ ಉತ್ಪನ್ನಗಳೊಂದಿಗೆ ಗುರ್ತಿಸುವುದು ಸರಿಯಲ್ಲ. ಜೊತೆಗೆ ಅರಣ್ಯ ಇಲಾಖೆ ನಿಯಂತ್ರಣದಲ್ಲಿರುವ 9500 ಮಾದರಿಯ ಆಯುರ್ವೇದ ಔಷಧ ಸಸ್ಯಗಳನ್ನು ಬೆಳೆಸಲು ಮುಕ್ತ ಅವಕಾಶ ನೀಡಬೇಕು ಎಂಬುದು ನಮ್ಮ ಶಿಫಾರಸು ಎಂದು ಸಚಿವ ಜಯಚಂದ್ರ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+