ಕರ್ನಾಟಕವನ್ನು ‘ಕೊಳಗೇರಿ ಮುಕ್ತ ರಾಜ್ಯ’ ಮಾಡಲು ಸಂಕಲ್ಪ

ಮಂಗಳೂರು : ರಾಜ್ಯದ ಕೊಳೆಗೇರಿ ನಿವಾಸಿಗಳ ಪುರೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ‘ನಿರ್ಮಲ ಜ್ಯೋತಿ ಯೋಜನೆ’ಯನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಹೊಸ ಯೋಜನೆಯು 2002ರ ಜನವರಿಯಲ್ಲಿ ಜಾರಿಗೆ ಬರಲಿದೆ.

ಕರ್ನಾಟಕವನ್ನು ಕೊಳಗೇರಿ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ನಿಟ್ಟನಲ್ಲಿ ಹೊಸ ಯೋಜನೆ ಜಾರಿಗೆ ತರಲಾಗುತ್ತಿದ್ದು, ಯೋಜನೆಯಡಿ ಕೊಳಗೇರಿಗಳಲ್ಲಿರುವ ಗುಡಿಸಿಲುಗಳ ಜಾಗದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಈ ವಿಷಯವನ್ನು ಕರ್ನಾಟಕ ಕೊಳಚೆ ಮಂಡಳಿಯ ಅಧ್ಯಕ್ಷ ಸಿ.ಆರ್‌. ನಾರಾಯಣಪ್ಪ ಇಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈಹೊತ್ತು 3000 ಕೊಳೆಗೇರಿಗಳಿವೆ. ಈ ಕೊಳೆಗೇರಿಗಳಲ್ಲಿ 14.97 ಲಕ್ಷ ಮಂದಿ ವಾಸಿಸುತ್ತಿದ್ದಾರೆ. ಹೊಸ ಯೋಜನೆಯಡಿ ಮಂಡಳಿಯು 989 ಕೊಳಗೇರಿಗಳನ್ನು ಗುರುತಿಸಿದ್ದು, ಶೀಘ್ರವೇ ಇವುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.

ಇದಕ್ಕಾಗಿ ರಾಜ್ಯ ಸರಕಾರವು ಜಪಾನ್‌ ಅಂತಾರಾಷ್ಟ್ರೀಯ ಸರಕಾರ ಬ್ಯಾಂಕ್‌ನಿಂದ 1,200 ಕೋಟಿ ರುಪಾಯಿಗಳ ಆರ್ಥಿಕ ನೆರವು ಕೋರಿದೆ ಎಂದೂ ಅವರು ತಿಳಿಸಿದರು.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+