ಶಿವಸುಬ್ರಮಣ್ಯಂ ಬಂಧನ ಕುರಿತು ತ.ನಾ.ಗೆ ಕರ್ನಾಟಕದ ವರದಿ
ಬೆಂಗಳೂರು : ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ನಕ್ಕೀರನ್ ಪತ್ರಿಕೆಯ ಸೇಲಂ ಜಿಲ್ಲಾ ವರದಿಗಾರ ಶಿವಸುಬ್ರಮಣ್ಯಂ ಬಂಧನ ಕುರಿತು ಕರ್ನಾಟಕ ಸರ್ಕಾರ ತಮಿಳುನಾಡಿಗೆ ಬುಧವಾರ ವರದಿಯಾಂದನ್ನು ಕಳುಹಿಸಿದೆ.
ಗೃಹ ಕಾರ್ಯದರ್ಶಿ ನರೇಶ್ ಗುಪ್ತಾ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಕಳೆದ ತಿಂಗಳು ಅರಣ್ಯ ಪ್ರದೇಶದಲ್ಲಿ ಬಂಧಿಸಲಾಗಿರುವ ಶಿವಸುಬ್ರಮಣ್ಯಂನಿಂದ ಇಲೆಕ್ಟ್ರಾನಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಸಮಾಜ ಘಾತುಕ ಕೃತ್ಯ ಎಸಗಲೂ ಬಳಸಬಹುದಾಗಿದೆ. ವಾಹನ ಚಾಲನಾ ಪರವಾನಗಿಯಿಂದ ಶಿವಸುಬ್ರಮಣ್ಯಂನನ್ನು ಪತ್ತೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶಿವಸುಬ್ರಮಣ್ಯಂನನ್ನು ಸೇಲಂ ಜಿಲ್ಲೆಯ ಅತ್ತೂರಿನ ಆತನ ಮನೆಯಿಂದ ಅಪಹರಿಸಲಾಗಿದೆ ಎಂದು ನಕ್ಕೀರನ್ ಸಂಪಾದಕ ಗೋಪಾಲ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications