ಉಜಿರೆ ಕಾಲೇಜಲ್ಲಿ ಜ್ಯೋತಿಷ್ಯ ವಿಜ್ಞಾನದ ಸರ್ಟಿಫಿಕೇಟ್‌ ಕೋರ್ಸ್‌

ಬೆಳ್ತಂಗಡಿ : ಮಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಉಜಿರೆ ಶ್ರೀ ಮಂಜುನಾಥೇಶ್ವರ ಕಾಲೇಜಿನ ಸಂಸ್ಕೃತ ವಿಭಾಗದ ಆಶ್ರಯದಲ್ಲಿ ಮೂರು ತಿಂಗಳ ಅವಧಿಯ ಜ್ಯೋತಿಷ್ಯ ಶಾಸ್ತ್ರದ ಸರ್ಟಿಫಿಕೇಟ್‌ ಕೋರ್ಸನ್ನು ಆರಂಭಿಸಿದೆ.

ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ಜ್ಯೋತಿಷ್ಯ ಕೋರ್ಸನ್ನು ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕ.ಪು. ಸೀತಾರಾಮ ಕೆದಿಲಾಯ ಉದ್ಘಾಟಿಸಿದರು. ಭಾರತೀಯ ಪರಂಪರೆಯ ಅಮೂಲ್ಯ ಶಾಸ್ತ್ರಗಳ ಪೈಕಿ ಜ್ಯೋತಿಷ್ಯವೂ ಒಂದಾಗಿದ್ದು, ವೇದಗಳನ್ನು ಅರ್ಥೈಸಲು ಸಹಾಯಕವಾದ ಜ್ಯೋತಿಷ್ಯ ಶಾಸ್ತ್ರವನ್ನು ತಜ್ಞ ವಿದ್ವಾಂಸರಿಂದ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಪ್ರೊ. ಜೆ. ಮಹಾವೀರ ಅವರು, ಯಾವುದೇ ಒಂದು ಜ್ಞಾನ ಶಾಖೆಯನ್ನು ಅಧ್ಯಯನ ಮಾಡದೆಯೇ ಸಾರಾಸಗಟಾಗಿ ಅಲ್ಲಗಳೆಯುವುದು ಸರಿಯಲ್ಲ . ಜ್ಯೋತಿಷ್ಯಶಾಸ್ತ್ರವನ್ನು ಪ್ರಾಮಾಣಿಕವಾಗಿ ಅಧ್ಯಯನ ನಡೆಸಿದ ನಂತರ ಆ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಬೇಕು ಎಂದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+