‘ಕಾಗದದ ದೋಣಿಯಲ್ಲಿ ಕುಳಿತ ನಂದಾದೀಪ ದಿಗ್ವಿಜಯಕ್ಕೆ ಹೊರಟಂತಿದೆ’
ಮಿತ್ರರೆ,
ನಮ್ಮ ವೆಬ್‌ಸೈಟಿನಲ್ಲಿ ಮೂಡಿಬರುತ್ತಲಿರುವ ಬಹುತೇಕ ಎಲ್ಲ ಸುದ್ದಿ-ಲೇಖನಗಳನ್ನು ನೀವು ಬೇಕುಬೇಕಾದಾಗೆಲ್ಲ ಹುಡುಕಿ ನೋಡುವ ಅವಕಾಶ (kannada Domain search)ಇದೀಗ ಕಲ್ಪಿಸಲಾಗಿದೆಯಷ್ಟೆ. ಇಂಟರ್‌ನೆಟ್ ಬಳಸುವವರಿಗೆ ತೀರ ಅಗತ್ಯವಾದ ಇಂಥದೊಂದು ಸಾಧನ-ಸಲಕರಣೆಯನ್ನು ನಿಮಗೆ ಕೊಡುವುದಕ್ಕೆ ಇಷ್ಟು ದಿನ ಬೇಕಾಯಿತು! ಕ್ಷಮೆ ಇರಲಿ. ನಾವು ಕನ್ನಡಿಗರು ಸುಕುಮಾರರಷ್ಟೇ ಅಲ್ಲ , ಕ್ಷಮಾ ವೀರರು ಕೂಡ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದೀರಿ ! ಈ ಸೌಲಭ್ಯ ಕಲ್ಪಿಸಿರುವುದಕ್ಕೆ ಥ್ಯಾಂಕ್ಸ್ ಹೇಳಿ ಅನೇಕರು ಈಮೇಲ್ ಕಳಿಸಿದ್ದಾರೆ. ಎಲ್ಲರಿಗೂ ಈ ಮೂಲಕವೇ ಧನ್ಯವಾದ ಹೇಳುತ್ತಿದ್ದೇನೆ.
ಮುಖ್ಯವಾದ ಸಂಗತಿಯೆಂದರೆ, ಓದುಗ ಮಹಾಶಯನ ಬೇಡಿಕೆ, ನಿರೀಕ್ಷೆ ಸಾಗರದಷ್ಟು. ಇವತ್ತು ನಿಮ್ಮ ಮುಂದಿಟ್ಟಿರುವುದು ಒಂದು ಬೊಗಸೆ ಮಾತ್ರ ಎಂಬ ಅರಿವು ನನಗಿದೆ. ನಿಮಗೆ ಅಗತ್ಯವಾದ , ಪ್ರಿಯವಾದ ಸಂಗತಿಗಳನ್ನು ಅರಿಯಲು ಕೀವರ್ಡ್ಸ್ ತುಂಬುತ್ತೀರಿ. ಅದು ಸಿಗುತ್ತದೋ ಇಲ್ಲವೋ ? ಸಿಕ್ಕರೂ ಮಾಹಿತಿ ಪೂರ್ಣವಾಗಿರುತ್ತದೆ ಎಂದೇನೂ ಇಲ್ಲ. ಈ ಅಂತರ್ಜಾಲ ವಾರಿಧಿಯಲ್ಲಿ ನಾವು ಏಕಪ್ರಕಾರವಾಗಿ ಮಾಡುತ್ತಾ ಬರುತ್ತಿರುವ ಈ ಪ್ರಯತ್ನ ‘ಕಾಗದದ ದೋಣಿಯಲ್ಲಿ ಕುಳಿತ ನಂದಾದೀಪ ದಿಗ್ವಿಜಯಕ್ಕೆ ಹೊರಟಂತಿದೆ’.. ಇರಲಿ.
ಕರ್ನಾಟಕದಿಂದ ಹೊರಹೊಮ್ಮುವ ಸುದ್ದಿಗೆ ನಾವು ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಅನೇಕ ಸುದ್ದಿಗಳಿಗೆ ತಲೆ-ಬಾಲ ಇರುವುದಿಲ್ಲ. ಅವರು ಭಾಷಣ ಹೊಡೆದರು, ನಾವು ಅದನ್ನು ಗೀಚಿದೆವು ! ಎನ್ನುವಂತಾಗುತ್ತದೆ. ಪ್ರತಿ ಕ್ಷಣವೂ ನಾವು ಜೀವಂತವಾಗಿರಬೇಕು ಎಂದು ಹೊರಟಾಗ ಈ ಎಲ್ಲ ದುರಂತಗಳಾಗುತ್ತವೆ. ಅದು ಈ ಮೀಡಿಯಂನ ಅನಿವಾರ್ಯ ಕೂಡ ಎನ್ನುವುದು ನಿಮಗೆ ಚೆನ್ನಾಗಿ ಗೊತ್ತಿದೆ.
ಇನ್ನು , ಕರ್ನಾಟಕದ ಹಲವು-ಹತ್ತು-ನೂರು-ಸಾವಿರ ಮಗ್ಗುಲುಗಳ ಬಗ್ಗೆ ನಿಖರವಾದ, ಗುಣಾತ್ಮಕವಾದ , ವಿಶಾಲವಾದ ಚಿತ್ರ ಕಟ್ಟಿಕೊಡಬೇಕು ಎಂಬ ಹೆಬ್ಬಯಕೆ ನಮ್ಮದು. ತಿರುಕನ ಕನಸು ಎನ್ನುತ್ತೀರಾ ? ಆದರೆ, ಹಾಳಾದ್ದು , ಈ ಸ್ಲೋ ಡೌನ್ ಎಂಬ ಪಿಶಾಚಿ ಯಾರನ್ನೂ ಬಿಟ್ಟಿಲ್ಲ. ನಮ್ಮ ಬೆನ್ನನ್ನೂ ಹತ್ತಿ ಕುಳಿತಿದೆ. ಹೊರೆ ಇಳಿಯುವವರೆಗೆ ಸೆಟೆದು ನಿಲ್ಲುವುದು ಕಷ್ಟ..
ನಾವು ಬರೆದದ್ದೇ ವೇದವಾಕ್ಯ ಎನ್ನುವ ಹಮ್ಮು ಬಿಮ್ಮು ನಮ್ಮದಲ್ಲ. ಅಸಂಖ್ಯಾತ ಓದುಗ ಬಳಗ ನಮ್ಮ ಸೈಟಿಗೆ ನಿತ್ಯ ಬಂದು ‘ ಇವತ್ತೇನು ವಿಶೇಷ’ ಕಣ್ಣಾಡಿಸುತ್ತಾರೆ. ಹಾಗೆ ನೋಡಿದರೆ ನಮ್ಮಲ್ಲಿ ವಿಶೇಷಗಳಿಗೇನೂ ಬರವಿಲ್ಲ. ನಾವು ಪ್ರತಿಕ್ಷಣ ಅಪ್‌ಲೋಡ್ ಮಾಡುತ್ತಿರುವುದೇ ಒಂದು ಪವಾಡ ! ನಾವು ಪ್ರೀತಿಯಿಂದ ಕೊಟ್ಟದ್ದನ್ನು ನೀವು ಅಭಿಮಾನದಿಂದ ಓದುತ್ತಾ ಬಂದಿದ್ದೀರಿ. ಕಾಳು, ಜಳ್ಳು, ನುಸಿ ಎಲ್ಲ ಕಂಡಿದ್ದೀರಿ. ಒಳ್ಳೆಯನ್ನು ಮೆಚ್ಚಿ ಕೊಂಡಾಡಿದ್ದೀರಿ. ಹಂಸಕ್ಷೀರ ನ್ಯಾಯ ಸದಾ ನಿಮ್ಮದಾಗಲಿ.
ಸಿಗುತ್ತೇನೆ.
ಎಸ್ಕೆ. ಶಾಮಸುಂದರ
ಸಂಪಾದಕ
ಮುಖಪುಟ / ಲೋಕೋಭಿನ್ನರುಚಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications