ರಾಷ್ಟ್ರದ ಹಿತಾಸಕ್ತಿಯಿಂದ ಪೊಟೊಗೆ ಸ್ವಾಗತ - ಹೆಗಡೆ
ಹುಬ್ಬಳ್ಳಿ : ಭಯೋತ್ಪಾದನಾ ಪ್ರತಿಬಂಧಕ ಸುಗ್ರೀವಾಜ್ಞೆ ಪೊಟೊವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಯುಕ್ತ ಜನತಾ ದಳದ ನಾಯಕ ರಾಮಕೃಷ್ಣ ಹೆಗಡೆ ಬೆಂಬಲಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ ಅನೇಕ ರೀತಿಯ ರಾಷ್ಟ್ರವಿರೋಧಿ ಚಟುವಟಿಕೆಗಳು ನಡೆಯುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ ಪೊಟೊದಂತಹ ಕಟ್ಟುನಿಟ್ಟಿನ ಕಾಯ್ದೆಯಾಂದರ ಅಗತ್ಯವಿದೆ ಎಂದು ಹೆಗಡೆ ಅಭಿಪ್ರಾಯಪಟ್ಟರು. ಅವರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಪೊಟೊವನ್ನು ವಿರೋಧಿಸುವ ನೈತಿಕ ಹಕ್ಕೇ ಇಲ್ಲ. ದೇಶದ ಹಿತಾಸಕ್ತಿಯ ದೃಷ್ಠಿಯಿಂದ ಪಕ್ಷಬೇಧವನ್ನು ತೊರೆದು ಕಾಂಗ್ರೆಸ್ ಪೊಟೊವನ್ನು ಬೆಂಬಲಿಸಬೇಕು. ಉಗ್ರಗಾಮಿ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಪೊಟೊ ಕಾಯ್ದೆಯನ್ನು ಎಲ್ಲರೂ ಬೆಂಬಲಿಸುವುದು ಸೂಕ್ತ ಎಂದು ಹೆಗಡೆ ಸಲಹೆ ಮಾಡಿದರು.
ಕಾಯ್ದೆಯನ್ನು ಒಪ್ಪಿಕೊಳ್ಳುವ ಮುನ್ನ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದೂ ಅಗತ್ಯ ಎಂದ ಹೆಗಡೆ, ಈ ಕುರಿತು ಕೇಂದ್ರ ಸರಕಾರವು ವಿರೋಧ ಪಕ್ಷಗಳೊಡನೆ ಸಮಗ್ರ ಚರ್ಚೆ ನಡೆಸಬೇಕು ಎಂದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications