ಪ್ರಾದೇಶಿಕ ನಾಟಕ ಶಾಲೆ ಆರಂಭಕ್ಕೆ ನಟ ನಾಸೀರುದ್ದೀನ್ ಶಾ ಕರೆ
ಮಂಗಳೂರು : ರಂಗಭೂಮಿಯ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾದೇಶಿಕ ನಾಟಕ ಶಾಲೆಗಳನ್ನು ತೆರೆಯಬೇಕು ಎಂದು ಖ್ಯಾತ ಚಿತ್ರನಟ ನಾಸೀರುದ್ದೀನ್ ಶಾ ಇಲ್ಲಿ ಕರೆ ನೀಡಿದ್ದಾರೆ. ಪ್ರಾದೇಶಿಕ ನಾಟಕ ಶಾಲೆ ಪ್ರಾರಂಭಿಸುವ ಮೂಲಕ ರಂಗಕಲೆಯನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ನಾಟಕ ಶಾಲೆಗಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಯೋಗಗಳನ್ನು ನಡೆಸಬೇಕು ಎಂದರು. ನಾವು ದೇಶದಲ್ಲಿ ರಂಗಭೂಮಿಯ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಯು ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ತರಬೇತಿ ನೀಡುವ ನಿಟ್ಟಿನಲ್ಲಿ ಸೋತಿದೆ ಎಂದು ಅವರು ಆರೋಪಿಸಿದರು. ಹಿಂದಿಯೇತರ ಪ್ರದೇಶಗಳಾದ ಒರಿಸ್ಸಾ, ಮಣಿಪುರ, ನಾಗಾಲ್ಯಾಂಡ್ ಮತ್ತು ದಕ್ಷಿಣ ಭಾರತದ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಭಾಷೆಯನ್ನು ಕಲಿಯದೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಸೇರಬಾರದು ಎಂದು ಅವರು ಸಲಹೆ ಮಾಡಿದರು.
ಈ ನಿಟ್ಟನಲ್ಲಿ ಪ್ರಾದೇಶಿಕ ನಾಟಕ ಶಾಲೆಗಳು ವಿದ್ಯಾರ್ಥಿಗಳ ಉದ್ದೇಶ ಈಡೇರಿಕೆಗೆ ನೆರವಾಗುವುದಲ್ಲದೆ, ಅವರ ರಂಗ ಕೌಶಲ್ಯ ಅಭಿವೃದ್ಧಿಗೆ ನೆರವಾಗಲಿವೆ ಎಂದೂ ನಾಸೀರುದ್ದೀನ್ ಶಾ ಹೇಳಿದರು. ತಾವು ಚಿತ್ರನಟರಾದಾಗ್ಯೂ ಕೂಡ ರಂಗಭೂಮಿಯಾಂದಿಗಿನ ನಂಟನ್ನು ಕಳೆದುಕೊಂಡಿಲ್ಲ ಎಂದು ಹೇಳಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications