ಗುಲಬರ್ಗಾ ರೈತರ ತೊಗರಿ ಕೇಂದ್ರ ಸ್ಥಾಪನೆ ಬೇಡಿಕೆಗೆ ಮತ್ತೆ ಜೀವ
ಗುಲಬರ್ಗಾ: ರಾಜಕಾರಣಿಗಳ ವೈಯಕ್ತಿಕ ಪ್ರತಿಷ್ಠೆ ಹಾಗೂ ಅನುಕೂಲಸಿಂಧು ರಾಜಕಾರಣದ ಕಾರಣ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಈ ಪ್ರದೇಶದ ರೈತರ ತೊಗರಿ ಮಂಡಳಿ ರಚನೆಯ ಬೇಡಿಕೆಗೆ ಮತ್ತೆ ಜೀವ ಬಂದಿದೆ.
ತೊಗರಿ ಮಂಡಲಿ ರಚನೆ ಬಗೆಗೆ ಸರ್ಕಾರಿ ವಲಯಗಳಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು , ಶೀಘ್ರದಲ್ಲಿಯೇ ತೊಗರಿ ಮಂಡಲಿಯನ್ನು ರಚಿಸಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ತಿಳಿಸಿದ್ದಾರೆ. ಖರ್ಗೆ ಅವರ ಹೇಳಿಕೆಯಾಂದಿಗೆ ತೊಗರಿ ಮಂಡಳಿ ರೂಪುಗೊಳ್ಳುವ ಕನಸುಗಳು ಮತ್ತೆ ಚಿಗುರಿವೆ. ಗುಲಬರ್ಗಾ ದೂರದರ್ಶನ ಕೇಂದ್ರ ಏರ್ಪಡಿಸಿದ್ದ ಸಮಕ್ಷಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖರ್ಗೆ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.
ತೊಗರಿ ಮಂಡಳಿ ರಚನೆಯಾಗುವ ತನಕ ಎಪಿಎಂಸಿ ಆವರ್ತ ನಿಧಿಯಲ್ಲಿ ರೈತರು ಬೆಳೆದ ತೊಗರಿ ಖರೀದಿಸುವ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲಿಸುವುದಾಗಿ ಖರ್ಗೆ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications