ಬೆಂಗಳೂರು ಇಸ್ಕಾನ್‌ನ ‘ಅಕ್ಷಯ ಪಾತ್ರೆ’ ಯೋಜನೆಗೆ ಒಂದು ವರ್ಷ
ಬೆಂಗಳೂರು : ಗ್ರಾಮೀಣ ಪ್ರದೇಶದ 1,500 ಬಡ ವಿದ್ಯಾರ್ಥಿಗಳ ಹಸಿವು ತೀರಿಸಲು ಕಳೆದ ವರ್ಷ ಇಸ್ಕಾನ್ ಆರಂಭಿಸಿದ ‘ಅಕ್ಷಯ ಪಾತ್ರೆ’ ಯೋಜನೆ ಈ ಹೊತ್ತು 19 ಸಾವಿರ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸುತ್ತಿದೆ.
ಈ ಯೋಜನೆಗೆ ಒಂದು ವರ್ಷವೂ ತುಂಬಿದೆ. ಈ ಸಂದರ್ಭದಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ವಿವರಿಸಿದ ಇಸ್ಕಾನ್ ಬೆಂಗಳೂರು ವಿಭಾಗದ ಮುಖ್ಯಸ್ಥರಾದ ಮಧು ಪಂಡಿತ್ ದಾಸ್ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು 2005ನೇ ಇಸವಿ ಹೊತ್ತಿಗೆ ಹಸಿವು ಮುಕ್ತ ವಿದ್ಯಾರ್ಥಿಗಳ ಜಿಲ್ಲೆಯನ್ನಾಗಿ ಪರಿವರ್ತಿಸುವ ಉದ್ದೇಶ ಸಂಸ್ಥೆಗಿದೆ ಎಂದು ಹೇಳಿದರು.
ಓದುವ ಆಸಕ್ತಿ ಇದ್ದರೂ, ಹಸಿವಿನ ಬೇಗೆಯಿಂದ ಪಾಠ-ಪ್ರವಚನದತ್ತ ಗಮನಹರಿಸಲಾಗದ ವಿದ್ಯಾರ್ಥಿಗಳ ಹಸಿವು ತೀರಿಸಿ, ಅವರ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಈ ಯೋಜನೆ ಆರಂಭಿಸಿದ್ದಾಗಿ ತಿಳಿಸಿದ ಅವರು, ಯೋಜನೆ ತ್ವರಿತಗತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ನಡೆದಿದೆ ಎಂದರು.
(ಇನ್‌ಫೋ ವಾರ್ತೆ)ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications