52 ಕೋಟಿ ರು. ಯೋಜನೆ; ಜಿಲ್ಲೆಗೊಂದು ನೇಕಾರ ನಗರ

ಬೆಂಗಳೂರು: 52 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನೇಕಾರ ನಗರಗಳನ್ನು ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನೇಕಾರರಿಗೆ ಅನುಕೂಲ ಕಲ್ಪಿಸಲು ರೂಪಿಸುತ್ತಿರುವ ಈ ನಗರಗಳು ನೇಕಾರರಿಗೆ ಅಗತ್ಯವಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿರುತ್ತವೆ ಎಂದು ಜವಳಿ ಹಾಗೂ ರೇಷ್ಮೆ ಖಾತೆ ಸಚಿವ ಎಂ. ಮಹದೇವ್‌ ಶುಕ್ರವಾರ ವಿಧಾನಸೌಧದಲ್ಲಿ ನಡೆದ ನೇಕಾರರ ವಸತಿ ಕುರಿತ ಉನ್ನತಮಟ್ಟದ ಸಭೆಯಲ್ಲಿ ತಿಳಿಸಿದರು.

ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ಮಂದಿ ನೇಕಾರರು ನಿರ್ವಸಿತರಾಗಿದ್ದು , ಪ್ರತಿಯಾಬ್ಬರಿಗೂ ಹಂತಹಂತವಾಗಿ ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಪ್ರಸಕ್ತ ವರ್ಷ 3873 ವಸತಿಯನ್ನು ನೇಕಾರರಿಗೆ ವಸತಿ ಕಲ್ಪಿಸಿಕೊಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟುವ ನೇಕಾರರಿಗೆ 18 ಸಾವಿರ ರುಪಾಯಿ ಹಾಗೂ ಪಟ್ಟಣ ಪ್ರದೇಶದಲ್ಲಿ ಮನೆ ನಿರ್ಮಿಸುವ ನೇಕಾರರಿಗೆ 20 ಸಾವಿರ ರುಪಾಯಿ ಸಹಾಯಧನ ನೀಡಲಾಗುವುದು ಎಂದು ಸಚಿವರು ಹೇಳಿದರು.

ಕೇಂದ್ರ ಸರ್ಕಾರದ ನೆರವು ದೊರೆತಲ್ಲಿ ಅಪೂರ್ಣಗೊಂಡಿರುವ ನೇಕಾರರ ವಸತಿ ಯೋಜನೆ ಪೂರ್ಣಗೊಳ್ಳುವುದೆಂದು ಮಹದೇವ್‌ ಅಭಿಪ್ರಾಯಪಟ್ಟರು. ರೇಷ್ಮೆ ಮತ್ತು ಜವಳಿ ಇಲಾಖೆ ಕಾರ್ಯದರ್ಶಿ ಸುಬಾಲ್‌ ಹರಿಸಿಂಗ್‌, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾ ಕಾರ್ಯದರ್ಶಿ ವೆಂಕಟೇಶ್ವರರಾವ್‌ ಸಭೆಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+