ಏಡ್ಸ್‌ಗೆ ನೀರೆರವ ಆಲ್ಕೋಹಾಲ್‌ ಹಾಗೂ ಭಾರತೀಯ ಸಂಸ್ಕೃತಿ!

*ಇನ್ಫೋ ಇನ್‌ಸೈಟ್‌

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಏಡ್ಸ್‌ ಕಾಯಿಲೆಗೂ ಆಲ್ಕೋಹಾಲ್‌ಗೂ ಹಾಗೂ ಭಾರತೀಯ ಸಂಸ್ಕೃತಿಗೂ ಎತ್ತಣಿಂದೆತ್ತಣ ನಂಟು? ಉಂಟೆನ್ನುತ್ತಾರೆ ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆಯ ಅಶೋಕ್‌ ರಾವ್‌.

ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಬಹಳಷ್ಟು ಮಂದಿ ಮದ್ಯಪಾನದ ಅಮಲಿನಲ್ಲಿ ಮುಳುಗಿರುತ್ತಾರೆ. ಕಾಂಡೊಮ್‌ ಬಳಕೆಗಿವರು ಸುತಾರಾಂ ಒಪ್ಪರು. ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್‌ ಬಳಸುವಂತೆ ಒತ್ತಾಯಿಸುವ ಪರಿಸ್ಥಿತಿಯಲ್ಲಿ ಹೆಂಗಸರು ಇರುವುದಿಲ್ಲ ಎನ್ನುತ್ತಾರೆ ಅಶೋಕ್‌. ಸಂಸ್ಕೃತಿಯದ್ದು ಮತ್ತೊಂದು ಬಗೆಯ ದುರಂತ : ಕಾಂಡೊಮ್‌ ಬಳಕೆಯನ್ನು ಭಾರತೀಯ ಸಂಸ್ಕೃತಿ ಹಾಗೂ ಸಂಕುಚಿತ ಸಾಮಾಜಿಕ ಕಟ್ಟಳೆಗಳು ಪ್ರೋತ್ಸಾಹಿಸುವುದಿಲ್ಲವಾದ್ದರಿಂದ ಅನೇಕ ಮಡಿವಂತರಿಗೆ ಕಾಂಡೊಮ್‌ ವರ್ಜ್ಯ. ಪರಿಣಾಮ- ಏಡ್ಸ್‌ಗೆ ಇರುವ ಏಕೈಕ ನಿಯಂತ್ರಣ ಸಾಧನವೂ ನಿಷ್ಪ್ರಯೋಜಕ. ಅಂದಹಾಗೆ, ಏಡ್ಸ್‌ ರೋಗಿಗಳ ಸಂಖ್ಯೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ.

ಕುಂಟುತ್ತಿರುವ ಏಡ್ಸ್‌ ವಿರೋಧಿ ಆಂದೋಲನ

ದೇಹ ಬಿಕರಿ ಮಾಡಿಕೊಳ್ಳುವವರು ಹಾಗೂ ಟ್ರಕ್‌ ಡ್ರೆೃವರ್‌ಗಳ ಕಾಯಿಲೆಯಾಗಿ ಮಾತ್ರ ಏಡ್ಸ್‌ ಉಳಿದಿಲ್ಲ . ಕಾರ್ಪೊರೇಟ್‌ ವಲಯದ ಮುಖ್ಯಸ್ಥರಿಂದ ಹಿಡಿದು ಕಾಲೇಜು ವಿದ್ಯಾರ್ಥಿಯವರೆಗೆ ಈಗ ಎಚ್‌ಐವಿ ಸೋಂಕು ಮಾಮೂಲು ಎಂದು ವಿಷಾದಿಸುತ್ತಾರೆ ಅಶೋಕ್‌. ಇವರು ಸ್ವಯಂ ಸೇವಾ ಸಂಸ್ಥೆಯಾದ ಫ್ರೀಡಂ ಫೌಂಡೇಶನ್‌ನ ಅಧ್ಯಕ್ಷರೂ ಹೌದು. ಸಂಸ್ಥೆ ಹಮ್ಮಿಕೊಂಡಿರುವ ಎಚ್‌ಐವಿ ನಿಯಂತ್ರಣ ಆಂದೋಲನ ಗುರ್ತಿಸಿ ಕಳೆದ ತಿಂಗಳಷ್ಟೇ ಕಾಮನ್‌ವೆಲ್ತ್‌ ಪ್ರಶಸ್ತಿ ಸಂದಿದೆ.

ಭಾರತದಲ್ಲಿ ಏಡ್ಸ್‌ ರೋಗಿಗಳ ಸಂಖ್ಯೆ 3.5 ಮಿಲಿಯನ್‌ ಎನ್ನುವುದೊಂದು ಅಂದಾಜು. ಆದರೆ ಈ ಸಂಖ್ಯೆ 5 ಮಿಲಿಯನ್‌ ಮುಟ್ಟುತ್ತದೆ ಎನ್ನುತ್ತದೆ ಅನಧಿಕೃತ ವರದಿ. ಇನ್ನೊಂದು ದಶಕದೊಳಗೆ ಏಡ್ಸ್‌ ಸೋಂಕುಳ್ಳವರ ಅತಿ ದೊಡ್ಡ ರಾಷ್ಟ್ರವಾಗಿ ಭಾರತ ಹೊರಹೊಮ್ಮುವ ಎಲ್ಲ ಸಾಧ್ಯತೆಗಳಿವೆ.

ದಕ್ಷಿಣದಲ್ಲಿ ಏಡ್ಸ್‌ ರೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ತಮಿಳುನಾಡಿಗೆ ಮೊದಲ ಸ್ಥಾನ. ಆನಂತರದ ಸ್ಥಾನದಲ್ಲಿ ಮಹಾರಾಷ್ಟ್ರ , ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ಮಣಿಪುರ.

ಏಡ್ಸ್‌ ರೋಗ ಹಾಗೂ ರೋಗಿಗಳ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಸಂಗ್ರಹಿಸುವ ಕೆಲಸವೇ ಸರಿಯಾಗಿ ನಡೆದಿಲ್ಲ . ಸರ್ಕಾರ ಈ ನಿಟ್ಟಿನಲ್ಲಿ ಮುಂದಾಗಬೇಕು ಎನ್ನುತ್ತಾರೆ ಅಶೋಕ್‌. ಮತ್ತೊಂದು ಸ್ವಯಂ ಸೇವಾ ಸಂಘಟನೆಯ ಕಾರ್ಯಕರ್ತ ವಿಜಯ್‌ ಕುಮಾರ್‌ ಅವರದೂ ಇದೇ ದೂರು. ಇವರು ಹೇಳುವಂತೆ- ಏಡ್ಸ್‌ ವಿರೋಧಿ ಆಂದೋಲನವನ್ನು ಸರ್ಕಾರ ತಳಮಟ್ಟದಿಂದ ಚುರುಕುಗೊಳಿಸಬೇಕು. ಈವರೆಗೆ ಏಡ್ಸ್‌ ರೋಗಿಗಳ ಬಗೆಗೆ ಮಾಹಿತಿ ಸಂಗ್ರಹಣೆ ಕ್ರಮಬದ್ಧವಾಗಿ ನಡೆದುದೇ ಇಲ್ಲ . ಈ ಕಾರಣದಿಂದಾಗಿ ಬಹಳಷ್ಟು ಎಚ್‌ಐವಿ ಪೀಡಿತರು ಅಜ್ಞಾತವಾಗಿಯೇ ಉಳಿದಿದ್ದಾರೆ.

ದುಡ್ಡೇನೋ ಸಾಕಷ್ಟಿದೆ, ಕಾರ್ಯಕ್ರಮಗಳೇ ಇಲ್ಲ

ಭಾರತದಲ್ಲಿ ಏಡ್ಸ್‌ ವಿರೋಧಿ ಕಾರ್ಯಕ್ರಮಗಳಿಗಾಗಿ ವಿಶ್ವಬ್ಯಾಂಕ್‌, ಯು ಸೆಡ್‌, ಕೆನಡಿಯನ್‌ ಇಂಟರ್‌ನ್ಯಾಶನಲ್‌ ಡೆವಲಪ್‌ಮೆಂಟ್‌ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಸ್ಥೆಗಳು ಮಿಲಿಯಗಟ್ಟಲೆ ಹಣ ಖರ್ಚು ಮಾಡುತ್ತಿವೆ. ಆದರೆ, ಸರ್ಕಾರವೇ ಈ ಕಾರ್ಯಕ್ರಮಗಳತ್ತ ಗಮನ ಹರಿಸಿಲ್ಲ . ಭಾರತೀಯ ಸಂಸ್ಕೃತಿ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿ ಸಂಪೂರ್ಣ ಭಿನ್ನವಾಗಿರುವುದೂ ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಅಶೋಕ್‌.

ಅಂತಿಮವಾಗಿ ಅಶೋಕ್‌ ಅವರು ಹೇಳುವುದು: ಇದೊಂದು ಬೆಳೆಯುತ್ತಿರುವ ಸಮಸ್ಯೆ. ಇದರ ನಿರ್ಮೂಲನೆಗೆ ಸಾಮೂಹಿಕ ಪ್ರಯತ್ನ ಬೇಕು. ಹೌದು, ಇವತ್ತು ಭಾರತದಲ್ಲಿನ ಎಲ್ಲ ಸಮಸ್ಯೆಗಳಿಗೂ ಸಾಮೂಹಿಕ ಪ್ರಯತ್ನವೇ ಮದ್ದು . ಆದರೆ ಮುಂದಾಗುವವರು ಯಾರು!?

ಏಡ್ಸ್‌ ಸುತ್ತ ಮುತ್ತ
ಮುಖಪುಟ / ಲೋಕೋಭಿನ್ನರುಚಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+