ನವರಂಗ್ ವೃತ್ತದ ಬಳಿ ಲಾರಿ- ಸ್ವರಾಜ್ ಮಜ್ದಾ ಡಿಕ್ಕಿ, 1 ಸಾವು
ಬೆಂಗಳೂರು: ಶನಿವಾರ ನಸುಕಿನಲ್ಲಿ 5.30 ರ ಸುಮಾರಿಗೆ ರಾಜಾಜಿನಗರದ ನವರಂಗ್ ವೃತ್ತದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮೃತನಾಗಿದ್ದಾನೆ.
ಲಾರಿ ಹಾಗೂ ಸ್ವರಾಜ್ ಮಜ್ದಾ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಲಾರಿ ನುಜ್ಜು ಗುಜ್ಜಾಗಿದೆ. ಈ ಅಪಘಾತಕ್ಕೆ ಒಬ್ಬ ಬಲಿಯಾಗಿದ್ದಾನೆ. ನುಜ್ಜುಗುಜ್ಜಾದ ಲಾರಿ ರಸ್ತೆಗೆ ಬಿದ್ದುದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು . ತಕ್ಷಣ ಕಾರ್ಯ ಪ್ರವೃತ್ತರಾದ ಸಂಚಾರಿ ಪೊಲೀಸರು, ಲಾರಿಯನ್ನು ತೆರವುಗೊಳಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.
ಅಪಘಾತದಲ್ಲಿ ಮೃತನಾದ ವ್ಯಕ್ತಿಯ ಹೆಸರು, ವಿಳಾಸ ತಕ್ಷಣಕ್ಕೆ ತಿಳಿದುಬಂದಿಲ್ಲ . ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications