ಜಾರ್ಜ್ ಫರ್ನಾಂಡಿಸ್‌ರಿಗೆ ಪ್ರತಿ ಪಕ್ಷಗಳಿಂದ ಷೇಮ್ ಷೇಮ್
ನವದೆಹಲಿ : ಸೋಮವಾರ ಆರಂಭವಾದ ಲೋಕ ಸಭೆಯ ಚಳಿಗಾಲದ ಅಧಿವೇಶನದ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂಪ್ರದಾಯದಂತೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಕಲಾಪವನ್ನು , ಸಭಾಧ್ಯಕ್ಷ ಜಿ.ಎಂ.ಸಿ.ಬಾಲಯೋಗಿ ಮಂಗಳವಾರಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಸಚಿವ ಸಂಪುಟಕ್ಕೆ ಮರು ಸೇರ್ಪಡೆಗೊಂಡ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸದನಕ್ಕೆ ಪರಿಚಯಿಸಿದಾಗ ವಿರೋಧ ಪಕ್ಷಗಳು ಷೇಮ್ ಷೇಮ್ ಎನ್ನುತ್ತಾ ಗದ್ದಲವೆಬ್ಬಿಸಿದವು. ತೆಹಲ್ಕಾ ಹಗರಣದಿಂದಾಗಿ ರಾಜೀನಾಮೆ ನೀಡಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ಕಳೆದ ತಿಂಗಳು ಮತ್ತೆ ರಕ್ಷಣಾ ಖಾತೆಯನ್ನೇ ನೀಡಲಾಗಿತ್ತು.
ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಭಯೋತ್ಪಾದನೆ ನಿಗ್ರಹ ಕಾಯ್ದೆ (ಪೋಟೋ), ಜಾರ್ಜ್ ಫರ್ನಾಂಡಿಸ್ ಮರು ನೇಮಕದ ವಿಷಯಗಳು ಪ್ರತಿಪಕ್ಷದ ತೀವ್ರ ವಾಗ್ದಾಳಿಗೆ ತುತ್ತಾಗುವ ನಿರೀಕ್ಷೆ ಇದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications