‘ಸಿಬಿಐ ಮೋಹ ಬಿಡಿ, ಸಾಂಗ್ಲಿಯಾನ ಮೇಲೆ ನಂಬಿಕೆಯಿಡಿ’
ಬೆಂಗಳೂರು : ನಕಲಿ ಸ್ಟಾಂಪ್ ಪೇಪರ್ ಜಾಲವನ್ನು ಪತ್ತೆ ಹಚ್ಚುವ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವ ಬದಲು ಬೆಂಗಳೂರು ಪೊಲೀಸರಿಗೇ ವಹಿಸಿಕೊಡಬೇಕೆಂದು ವಿಧನ ಪರಿಷತ್ತಿನ ಪ್ರತಿಪಕ್ಷಗಳ ನಾಯಕ ಹಾಗೂ ಜಾತ್ಯತೀತ ಜನತಾದಳದ ಹಿರಿಯ ಮುಖಂಡ ಕೆ.ಎಚ್.ಶ್ರೀನಿವಾಸ್ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಒತ್ತಾಯಿಸಿದ್ದಾರೆ.
ನಕಲಿ ಸ್ಟಾಂಪ್ ಪೇಪರ್ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ . ಬೆಂಗಳೂರು ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ ಅವರಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ. ತನಿಖೆಯಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿದರೆ ಅಪರಾಧಿಗಳನ್ನು ಸಾಂಗ್ಲಿಯಾನ ಬಯಲಿಗೆಳೆಲು ಸಮರ್ಥರು ಎಂದು ಶ್ರೀನಿವಾಸ್ ಹೇಳಿದರು.
ಕೆಲವು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಗಳು ಸಚಿವರೊಬ್ಬರಿಗೆ ಸಂಬಂಧಿಸಿದ ವ್ಯಕ್ತಿಯಾಬ್ಬ ನಕಲಿ ಸ್ಟಾಂಪ್ ಪೇಪರ್ ಜಾಲದಲ್ಲಿ ಭಾಗಿಯಾಗಿರುವ ಗುಮಾನಿಯಿದೆ. ಆ ಕಾರಣದಿಂದಾಗಿಯೇ ಪ್ರಕರಣದ ಬಗೆಗಿನ ತನಿಖೆ ನಡೆಸುವಂತೆ ಸಿಬಿಐನ್ನು ಕೇಳುವಂತೆ ಮುಖ್ಯಮಂತ್ರಿ ಕೃಷ್ಣ ಅವರನ್ನು ಸಾಂಗ್ಲಿಯಾನ ಕೇಳಿಕೊಂಡಿರುವುದಾಗಿ ತಿಳಿದುಬಂದಿದೆ. ಆದರೆ, ಪ್ರಕರಣವನ್ನು ಸಿಬಿಐಗೆ ವಹಿಸಿಕೊಟ್ಟರೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಂತಾಗುತ್ತದೆ ಎಂದು ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಸ್ಟಾಂಪ್ ಪೇಪರ್ ಜಾಲದಲ್ಲಿ ಹೆಸರು ಕೇಳಿಬರುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಹಾಗೂ ಸಂಬಂಧಿಸಿದ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಕೃಷ್ಣ ಅವರನ್ನು ಶ್ರೀನಿವಾಸ್ ಒತ್ತಾಯಿಸಿದರು.
(ಪಿಟಿಐ)
ಮುಖಪುಟ / ಸಾಂಗ್ಲಿಯಾನ ವಾಚ್












Click it and Unblock the Notifications