ಹುಲಿ ಚರ್ಮ ಮಾರಾಟ: ಕೊಲ್ಕತ್ತಾದಲ್ಲಿ ಶಿವಮೊಗ್ಗ ದಂಪತಿ ಸೆರೆ
ಕೋಲ್ಕತಾ : ಇಲ್ಲಿನ ಮಾರುಕಟ್ಟೆಯಲ್ಲಿ ಹುಲಿ ಚರ್ಮ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಕರ್ನಾಟಕದ ಗಂಡ- ಹೆಂಡತಿ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಸೇರಿದ ಸುರೇಶ್ ಪಹರಿ ರಜಪೂತ್ ಹಾಗೂ ಆತನ ಪತ್ನಿ ಸುಜಾತ ಎನ್ನುವವರು ಭಾನುವಾರ ಸಂಜೆ ಉತ್ತರ ಕೊಲ್ಕತ್ತಾದಲ್ಲಿ ಹುಲಿ ಚರ್ಮ ಹಾಗೂ ಉಗುರುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರ ಬಂಧನಕ್ಕೆ ಒಳಗಾದರು.
ಜೋರಬಗಾನ್‌ನ ಅಂಗಡಿಯಾಂದರಲ್ಲಿ ಹುಲಿ ಉಗುರನ್ನು ದಂಪತಿಗಳು ಮಾರಾಟ ಮಾಡಲು ಪ್ರಯತ್ನಿಸಿದಾಗ, ಅಂಗಡಿ ಮಾಲಿಕ ನೀಡಿದ ಮಾಹಿತಿಯ ಮೇಲೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಕುಂದನ್ ಲಾಲ್ ತಮಟ ಎಕ್ಸ್‌ಪ್ಲೊಸಿಟಿ.ಕಾಂಗೆ ತಿಳಿಸಿದ್ದಾರೆ. ಬಂಧಿತರಿಂದ 6 ಹುಲಿಯ ಚರ್ಮ ಹಾಗೂ 2 ಹುಲಿ ಉಗುರು ವಶಪಡಿಸಿಕೊಳ್ಳಲಾಗಿದೆ. ತನಿಖೆಯ ಸಂದರ್ಭದಲ್ಲಿ ಕಳ್ಳನೊಬ್ಬನಿಂದ ಹುಲಿಚರ್ಮ ಖರೀದಿಸಿದ್ದಾಗಿ ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications