ಪ್ರಚಾರಕ್ಕಾಗಿ ನಗರಗಳಲ್ಲಿ ಕಲಾವಿದರ ವಾಸ-ಎಸ್.ಎಲ್.ಭೈರಪ್ಪ
ಯಲ್ಲಾಪುರ : ಪ್ರಚಾರ ಪಡೆಯುವ ಬಯಕೆಯಿಂದ ಕೆಲವು ಕಲಾವಿದರು ನಗರ ಪ್ರದೇಶಗಳಲ್ಲಿ ವಾಸವಾಗಿರುತ್ತಾರೆ. ಆದರೆ, ಪ್ರಚಾರದ ಹುಚ್ಚಿನಿಂದ ದೂರವಾದ ಚಂದ್ರಶೇಖರ ಪುರಾಣಿಕಮಠ ಮತ್ತು ಗಣಪತಿಭಟ್ ಹಾಸಣಗಿ ಅವರು ಗ್ರಾಮೀಣ ಪ್ರದೇಶದಲ್ಲಿಯೇ ಸಂಗೀತ ಪ್ರಪಂಚ ಸೃಷ್ಟಿಸಿದ್ದಾರೆ. ಅಪಾರ ಶಿಷ್ಯವೃಂದವನ್ನೂ ಗಳಿಸಿದ್ದಾರೆ ಎಂದು ಜನಪ್ರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಶ್ಲಾಘಿಸಿದ್ದಾರೆ.
ಯಲ್ಲಾಪುರದ ಮಂಚಿಕೇರಿಯಲ್ಲಿ ಪದ್ಮಭೂಷಣ ಪಂಡಿತ ಬಸವರಾಜ್ ರಾಜಗುರು ಪುರಸ್ಕಾರದ ಗುರುವಂದನಾ ಸಮಾರಂಭದಲ್ಲಿ ಭೈರಪ್ಪನವರು ಶನಿವಾರ ಮಾತನಾಡುತ್ತಿದ್ದರು. ಮಂಚಿಕೇರಿಯಲ್ಲಿ ಅದ್ಭುತ ಸಂಗೀತ ಪರಂಪರೆ ಸೃಷ್ಟಿಸಿರುವ ಗಣಪತಿ ಭಟ್ ಅವರ ಸಾಧನೆಯನ್ನು ಹೊಗಳಿದ ಭೈರಪ್ಪ , ನಿಷ್ಠೆಯುಳ್ಳವರು ಮಾತ್ರ ಭವಿಷ್ಯದಲ್ಲಿ ಸಂಗೀತ ಪ್ರೇಮಿಗಳಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆ ಅಪಾರ ಕಲಾವಿದರನ್ನು ಹೊಂದಿದೆ. ಇಲ್ಲಿನ ಕಲಾವಿದರು ತಮ್ಮ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲ ಪ್ರಯತ್ನಗಳನ್ನು ನಡೆಸಬೇಕು ಎಂದು ಭೈರಪ್ಪ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಶೇಖರ್ ಪುರಾಣಿಕಮಠ ಅವರು, ತಮಗೆ ಉತ್ತರ ಕನ್ನಡದಲ್ಲಿಯೇ ನಿರಂತರವಾಗಿ ಕಲಾಸೇವೆ ಮಾಡುವ ಅವಕಾಶ ಸಿಗಲಿ ಎಂದು ಆಶಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications