ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವರ್ಷದಿಂದ ಕಾಲೇಜಲ್ಲಿ ಕಂಪ್ಯೂಟರ್‌ ಶಿಕ್ಷಣ ಕಡ್ಡಾಯ

By Super
|
Google Oneindia Kannada News

ಬೆಂಗಳೂರು : 2002-03ನೇ ಶೈಕ್ಷಣಿಕ ವರ್ಷದಿಂದ ಪದವಿ ಮಟ್ಟದಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಕಡ್ಡಾಯ ಮಾಡಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್‌ ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸುವ ರೀತಿಯಲ್ಲಿ ಈ ಶಿಕ್ಷಣ ನೀಡಲಾಗುವುದು ಎಂದು ಅವರು ತಿಳಿಸಿದರು.

ಜ್ಞಾನಾರ್ಜನೆಗಾಗಿ ಶಿಕ್ಷಣ ಎಂಬ ನೀತಿ ಈಗ ಬದಲಾಗಿದೆ. ಉದ್ಯೋಗಕ್ಕಾಗಿಯೇ ಓದುವ ಕಾಲ ಬಂದಿದೆ. ಈ ನಿಟ್ಟಿನಲ್ಲಿ ಬ್ಯಾಚುಲರ್‌ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್‌ ಹಾಗೂ ಬ್ಯಾಚುಲರ್‌ ಇನ್‌ಬಯೋಟೆಕ್‌ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ಪ್ರೆಸ್‌ಕ್ಲಬ್‌ ಸೋಮವಾರ ಆಯೋಜಿಸಿದ್ದ ಪತ್ರಿಕಾ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಪ್ರಸಕ್ತ ಜಾರಿಯಲ್ಲಿರುವ ಶಿಕ್ಷಣ ನೀತಿಯಲ್ಲಿ, ಕಂಪ್ಯೂಟರ್‌ ಕೇವಲ ಐಚ್ಛಿಕವಾಗಿದೆ. ಈ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗುವುದು ಎಂದರು.

40 ಗಂಟೆ ಪ್ರವಚನ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಮತ್ತು ಉಪನ್ಯಾಸಕರ ಜವಾಬ್ದಾರಿ ಹೆಚ್ಚಿಸುವ ಸಲುವಾಗಿ ಬರುವ ವರ್ಷದಿಂದ ವಿದ್ಯಾರ್ಥಿಗಳಿಂದಲೇ ಉಪನ್ಯಾಸಕರ ಮೌಲ್ಯಮಾಪನ ಮಾಡಿಸುವ ಪದ್ಧತಿ ಜಾರಿಗೆ ತರಲಾಗುವುದು. ಅಲ್ಲದೆ ವಾರದಲ್ಲಿ ಕನಿಷ್ಠ 40 ಗಂಟೆಗಳ ಕಾಲ ಉಪನ್ಯಾಸಕರು ಪಾಠ ಮಾಡಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ಉಪಗ್ರಹ ಶಿಕ್ಷಣ : ಕಂಪ್ಯೂಟರ್‌ ಶಿಕ್ಷಣಕ್ಕೆ ತಜ್ಞ ಉಪನ್ಯಾಸಕರ ಕೊರತೆ ಇದ್ದು, ಈ ಕೊರತೆ ನೀಗಿಸಲು ಉಪಗ್ರಹ ಮೂಲಕ ಪಾಠ ಪ್ರವಚನ ನಡೆಸುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದೂ ಅವರು ಹೇಳಿದರು. ಈಗಾಗಲೇ ಮೈಸೂರು ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗಾಗಿ ಉಪಗ್ರಹ ಶಿಕ್ಷಣ ಪಠ್ಯ ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಕೃಷ್ಣ ಅವರು ಈ ತಿಂಗಳು ಅದನ್ನು ಉದ್ಘಾಟಿಸಲಿದ್ದಾರೆ ಎಂದೂ ಪರಮೇಶ್ವರ್‌ ಹೇಳಿದರು.

English summary
Computer Education is compulsory from next year in degree level says higher education minister
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X