ವಿಧಾನಸೌಧ, ಎಸ್.ಎಂ. ಕೃಷ್ಣ ಮನೆಯಲ್ಲಿ ಬಾಂಬ್: ಹುಸಿ ಬೆದರಿಕೆ
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮನೆ ಹಾಗೂ ವಿಧಾನಸೌಧದ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಅನಾಮಧೇಯ ದೂರವಾಣಿ ಕರೆ, ಕೆಲವು ಗಂಟೆಗಳ ಕಾಲ ಗೊಂದಲದ ವಾತಾವರಣ ಸೃಷ್ಟಿಸಿತ್ತು.
ಸೋಮವಾರ ಬೆಳಗ್ಗೆ ಈ ಕರೆ ಬಂದಾಗ, ಕಾರ್ಯಪ್ರವೃತ್ತರಾದ ಪೊಲೀಸರು, ಬಾಂಬ್ ನಿರೋಧಕ ದಳ ಹಾಗೂ ಶ್ವಾನದಳದೊಂದಿಗೆ ಬಾಂಬ್‌ಗಾಗಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣ ಹಾಗೂ ವಿಧಾನಸೌಧದ ಕಚೇರಿಯಲ್ಲಿ ವ್ಯಾಪಕ ಶೋಧ ನಡೆಸಿದರು. ಕೊನೆಗಿದು ಹುಸಿಬಾಂಬ್ ಕರೆ ಎಂಬುದು ಸಾಬೀತಾಯಿತು.
ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಅನಾಮಧೇಯನೊಬ್ಬ ಶಿವನಹಳ್ಳಿಯ ಫಾರ್ಮಸಿಯಿಂದ ಈ ಕರೆ ಮಾಡಿದ್ದಾನೆಂದು ಪತ್ತೆ ಹಚ್ಚಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಕರ್ನಾಟಕ, ಗೋವಾ, ಆಂಧ್ರ ಚರ್ಚ್‌ಗಳಲ್ಲಿ ಸರಣಿ ಸ್ಫೋಟ ನಡೆದ ಸಂದರ್ಭದಲ್ಲಿ ಇಂತಹ ಹುಸಿ ಬಾಂಬ್ ಬೆದರಿಕೆ ಕರೆಗಳು ನಾಗರಿಕರನ್ನು ಮತ್ತು ಪೊಲೀಸರನ್ನು ಕಂಗೆಡಿಸಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.
(ಇನ್‌ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications