ಯೂರೋ ಪಾರ್ಲಿಮೆಂಟ್ ಉಡಾಯಿಸಲು ಸಂಚು ರೂಪಿಸಿದ್ದ ಲ್ಯಾಡೆನ್
ಲಂಡನ್ : ಕಳೆದ ಫೆಬ್ರವರಿಯಲ್ಲಿ ಸ್ಟ್ರಾಸ್ಬರ್ಗ್ನಲ್ಲಿರುವ ಯುರೋಪಿಯನ್ ಪಾರ್ಲಿಮೆಂಟ್ ಭವನದೊಳಗೆ ಮಾರಣಾಂತಿಕ ಸರಿನ್ ನರ್ವ್ ಅನಿಲವನ್ನು ಹಾಯಿಸಲು ಬಿನ್ ಲ್ಯಾಡೆನ್ ಯೋಜಿಸಿದ್ದ ಸಂಚು ಇದೀಗ ಬೆಳಕಿಗೆ ಬಂದಿದೆ. ಆದರೆ, ಈ ಸಂಚನ್ನು ಜರ್ಮನ್ ಪೊಲೀಸರು ವಿಫಲಗೊಳಿಸಿದ್ದಾಗಿ ಬ್ರಿಟೀಷ್ ಪತ್ರಿಕೆ ಸಂಡೆ ಟೆಲಿಗ್ರಾಫ್ ವರದಿ ಮಾಡಿದೆ.
ಮಾರಣಾಂತಿಕ ಅನಿಲ ಹಾಯಿಸುವ ಮೂಲಕ ಯೂರೋ ಪಾರ್ಲಿಮೆಂಟ್ನ ಎಲ್ಲ 625 ಸಂಸದರನ್ನು ಕೊಲ್ಲಲು ಲ್ಯಾಡೆನ್ ಉದ್ದೇಶಿಸಿದ್ದ. ಇದಕ್ಕಾಗಿ 6 ಬಲಿಷ್ಠ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸನ್ನು ಪೂರೈಸಿದ್ದ ಎಂದು ಬ್ರಿಟೀಷ್ ಭಯೋತ್ಪಾದಕ ವಿರೋಧಿ ಮೂಲಗಳನ್ನುದ್ದೇಶಿಸಿ ಟೆಲಿಗ್ರಾಫ್ ವರದಿ ಮಾಡಿದೆ.
ಯೂರೋ ಪಾರ್ಲಿಮೆಂಟ್ ಮೇಲಿನ ಉದ್ದೇಶಿತ ದಾಳಿಯನ್ನು ಫೆಬ್ರವರಿ 11 ರಿಂದ 14 ರೊಳಗೆ ನಡೆಸಲು ಉದ್ದೇಶಿಸಲಾಗಿತ್ತು . ಇದು ಯುರೋಪಿನ ಪ್ರಮುಖ ಕಟ್ಟಡಗಳನ್ನು ನಾಶ ಮಾಡುವ ಲ್ಯಾಡೆನ್ ಯೋಜನೆಯ ಮೊದಲ ನಡೆಯಾಗಿತ್ತು . ಇದಕ್ಕಾಗಿ ಲಂಡನ್ ಮೂಲದ ಅಲ್ಜೀರಿಯನ್ ಭಯೋತ್ಪಾದಕರಿಗೆ ನೇರವಾಗಿ ಹಣಕಾಸು ಪೂರೈಕೆಯಾಗಿತ್ತು . ಆದರೆ, ಜರ್ಮನ್ ಪೊಲೀಸರ ಫ್ರಾಂಕ್ಫರ್ಟ್ ಆಪರೇಷನ್ನಿಂದಾಗಿ ಈ ಯೋಜನೆ ವಿಫಲವಾಯಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿ ಆರೋಪಗಳನ್ನು ಹೊರಿಸಿದ್ದರೂ, ಆನಂತರ ಅವರ ಮೇಲಿನ ಮೊಕದ್ದಮೆಗಳನ್ನು ವಾಪಸ್ಸು ಪಡೆಯಲಾಯಿತು ಹಾಗೂ ಆರೋಪಿಗಳನ್ನು ಬಿಡುಗಡೆ ಮಾಡಲಾಯಿತು ಎಂದು ಟೆಲಿಗ್ರಾಫ್ ವರದಿ ಮಾಡಿದೆ.
(ಪಿಟಿಐ)
ಮುಖಪುಟ / ಭಯೋತ್ಪಾದನೆ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications