ವರ್ತುಲ ರಸ್ತೆಗೆ ದೇವೇಗೌಡ, ಅವೆನ್ಯೂಗೆ ವೆಂಕಟಗಿರಿಗೌಡರ ಹೆಸರು

ಬೆಂಗಳೂರು : ನಗರದ ವರ್ತುಲ ರಸ್ತೆ(ರಿಂಗ್‌ ರೋಡ್‌)ಗೆ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರ ಹೆಸರು ಮತ್ತು ನಗರದ ಹೃದಯ ಭಾಗದಲ್ಲಿರುವ ಅವೆನ್ಯೂ ರಸ್ತೆಗೆ ಮಾಜಿ ಸಂಸದ ಪ್ರೊ. ವೆಂಕಟಗಿರಿ ಗೌಡರ ಹೆಸರನ್ನು ಇಡಲು ಮಹಾನಗರ ಪಾಲಿಕೆ ಬುಧವಾರ ಒಪ್ಪಿಗೆ ನೀಡಿದೆ.

ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಮಾಜಿ ಮೇಯರ್‌ ಹುಚ್ಚಪ್ಪ ಅವರು ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ರಿಂಗ್‌ ರೋಡ್‌ಗೆ ಇಡುವ ನಿರ್ಣಯ ಮಂಡಿಸಿದರು. ಸಾಕಷ್ಟು ಚರ್ಚೆಯ ಬಳಿಕ ಈ ನಿರ್ಣಯವನ್ನು ಅನುಮೋದಿಸಲಾಯಿತು.

ಇದಾದ ಬಳಿಕ ಮೇಯರ್‌ ಎಂ. ರಾಮಚಂದ್ರಪ್ಪ ಅವರು ನಗರದ ಅವೆನ್ಯೂ ರಸ್ತೆಗೆ ಮಾಜಿ ಸಂಸದ, ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ವೆಂಕಟಗಿರಿಗೌಡರ ಹೆಸರನ್ನು ಸೂಚಿಸುವ ನಿರ್ಣಯ ಮಂಡಿಸಿದರು. ಈ ಎರಡೂ ನಿರ್ಣಯಗಳಿಗೆ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರೂ, ಪರ ವಿರೋಧಗಳ ನಡುವೆ ಎರಡೂ ನಿರ್ಣಯಗಳು ಒಪ್ಪಿಗೆ ಪಡೆದವು.

ಪರಸ್ಪರ ಬದ್ಧ ವೈರಿಗಳಾದ ದೇವೇಗೌಡರು ಹಾಗೂ ವೆಂಕಟಗಿರಿ ಗೌಡರ ಹೆಸರನ್ನು ನಗರದ ಎರಡು ಪ್ರಮುಖ ರಸ್ತೆಗಳಿಗೆ ಸೂಚಿಸಿರುವ ಬಗ್ಗೆ ಪಾಲಿಕೆಯ ಕೆಲ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು. ಪ್ರಸ್ತುತ, ಪಾಲಿಕೆಯ ನಿರ್ಣಯವನ್ನು ಸರಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿದೆ.

ನಿಮಗೇನನಿಸುತ್ತೆ ?

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು?
ನಾಮಕರಣ ನವೀಕರಣ : ನಮ್ಮೂರ ದಾರಿಗಿಡಿ ದಿಗ್ಗಜರ ಹೆಸರ ರಂಗವಲ್ಲಿ
ಕಾರವಾರದ ಬೀಚ್‌ಗೆ ಟಾಗೋರ್‌ ಹೆಸರೇಕೆ?

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+