ಕಿರುಚುವ ಧ್ವನಿವರ್ಧಕಕ್ಕೆ ಕಡಿವಾಣ ಹಾಕಿ -ಸರಕಾರಕ್ಕೆ ನೋಟಿಸ್
ಬೆಂಗಳೂರು : ಧ್ವನಿವರ್ಧಕಗಳನ್ನು ಯದ್ವಾ ತದ್ವಾ ಬಳಸಿ ನಗರದ ಸಾರ್ವಜನಿಕ ಪ್ರದೇಶ, ದೇವಸ್ಥಾನ ಮತ್ತಿತರ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸಲು ಕಾನೂನು ಕ್ರಮಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟೀಸು ಕಳಿಸಿದೆ.
ಪ್ರತಿವಾದಿಗಳ ಪಟ್ಟಿಯಲ್ಲಿ ಪರಿಸರ ನಿಯಂತ್ರಣ ಮಂಡಳಿ ಮತ್ತು ಪೊಲೀಸ್ ಆಯುಕ್ತರ ಹೆಸರುಗಳಿವೆ. ಸಾರ್ವಜನಿಕರು ಶಾಂತ ಜೀವನದ ಹಕ್ಕಿನಿಂದ ವಂಚಿತರಾಗಿದ್ದು ಶಬ್ದ ಮಾಲಿನ್ಯ ನಿಯಂತ್ರಿಸುವಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಕಾನೂನಾತ್ಮಕ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿರುವುದಾಗಿ ಕೋರ್ಟ್ ಟೀಕಿಸಿದೆ.
ಧ್ವನಿವರ್ಧಕಗಳಿಂದಾಗುತ್ತಿರುವ ಶಬ್ದಮಾಲಿನ್ಯ ತಡೆಗಟ್ಟುವಂತೆ ಸರಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿದ ಜಯನಗರದ ಜಿ. ಎಸ್. ರಾಜಶೇಖರಯ್ಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶ ಜಿ. ಸಿ. ಭರುಕಾ ಮತ್ತು ನ್ಯಾಯಮೂರ್ತಿ ಆರ್. ಗುರುರಾಜನ್ ಸರಕಾರಕ್ಕೆ ನೋಟಿಸು ಜಾರಿ ಮಾಡಿದ್ದಾರೆ.
(ಇನ್ಫೋ ವಾರ್ತೆ)












Click it and Unblock the Notifications