ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದ ಕೊಡುಗೆ ಬೆಂಗಳೂರಿನ ರಸ್ತೆಗಳಿಗೆ ಸಾಹಿತಿಗಳ ಹೆಸರು

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನ ಕನಿಷ್ಠ 25 ರಸ್ತೆಗಳಿಗೆ ಕನ್ನಡನಾಡಿನ ಗಣ್ಯರ - ಸಾಹಿತಿಗಳ ಹೆಸರನ್ನು ಇಡಲು ಬೆಂಗಳೂರು ಮಹಾ ನಗರ ಪಾಲಿಕೆ ನಿರ್ಧರಿಸಿದೆ. ರಾಜ್ಯೋತ್ಸವ ದಿನದಿಂದ ರಸ್ತೆಗಳಿಗೆ ಮರು ನಾಮಕರಣ ಕಾರ್ಯ ನಡೆಯಲಿದೆ. ಈ ವಿಷಯವನ್ನು ಪಾಲಿಕೆಯ ಆಯುಕ್ತ ಅಶೋಕ್‌ ದಳವಾಯಿ ತಿಳಿಸಿದ್ದಾರೆ.

ಬುಧವಾರ ನಡೆದ ಮಹಾನಗರ ಪಾಲಿಕೆಯ ಸಭೆಯಲ್ಲಿ ಮಾಜಿ ಮೇಯರ್‌ ಎಂ. ರಾಮಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು, ನಗರದ ಪ್ರಮುಖ ರಸ್ತೆಗಳಿಗೆ ಕನ್ನಡನಾಡಿನ ಗಣ್ಯರ ಹೆಸರಿಡುವ ಮೂಲಕ ನವೆಂಬರ್‌ ತಿಂಗಳಿನಿಂದ ಕನ್ನಡ ವಾತಾವರಣಕ್ಕೆ ಇಂಬು ನೀಡಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ನಗರದ ರಸ್ತೆಗಳಿಗೆ ಗಣ್ಯರ ಹೆಸರನ್ನಿಡಲೆಂದೇ ನೂರು ಸುಪ್ರಸಿದ್ಧರ ಹೆಸರುಗಳ ಪಟ್ಟಿಯನ್ನು ಕಳುಹಿಸಿದ್ದಾರೆ. ಆದರೆ, ಈ ಎಲ್ಲ ಹೆಸರುಗಳನ್ನೂ ಇಡಲು ಸಾಧ್ಯವಿಲ್ಲ. ಅದರಲ್ಲಿ 25 ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ನವೆಂಬರ್‌ 1ರಿಂದ ಈ ಹೆಸರುಗಳನ್ನು ಇಡಲು ಕ್ರಮಕೈಗೊಳ್ಳಲಾಗುವುದು ಎಂದರು.

ನಿಮಗೇನನಿಸುತ್ತೆ ?

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ವರ್ತುಲ ರಸ್ತೆಗೆ ದೇವೇಗೌಡ, ಅವೆನ್ಯೂಗೆ ವೆಂಕಟಗಿರಿಗೌಡರ ಹೆಸರು
ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು?
ನಾಮಕರಣ ನವೀಕರಣ : ನಮ್ಮೂರ ದಾರಿಗಿಡಿ ದಿಗ್ಗಜರ ಹೆಸರ ರಂಗವಲ್ಲಿ
ಕಾರವಾರದ ಬೀಚ್‌ಗೆ ಟಾಗೋರ್‌ ಹೆಸರೇಕೆ?

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X