Get Updates
Get notified of breaking news, exclusive insights, and must-see stories!

ಸೈಬರ್‌ ಪೊಲೀಸ್‌ ಠಾಣೆ !

ಇಪ್ಪತ್ಮೂರು ತಿಂಗಳುಗಳ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸ್ಮರಣೀಯ ದಿನ ಯಾವುದು? ಜಾಗತಿಕ ಬಂಡವಾಳಗಾರರ ಸಮ್ಮೇಳನ, ಬೆಂಗಳೂರು ಐಟಿ.ಕಾಂ ಮುಂತಾದ ಸಾಧನೆಗಳ ಮೂಲಕ ಬೆಂಗಳೂರಿನತ್ತ ವಿಶ್ವದ ಕಣ್ಣನ್ನು ಹೊರಳಿಸಿದ ಹೆಚ್ಚುಗಾರಿಕೆ ಅವರದು. ಆದರೆ, ಕೃಷ್ಣ ಅವರ ಆಡಳಿತಾವಧಿಯ ಮಹತ್ವದ ದಿನದ ಪಟ್ಟ ಆಗಸ್ಟ್‌ 30 ಕ್ಕೆ ಸಲ್ಲುವುದೇ ಸರಿ!

ಆಗಸ್ಟ್‌ 30 ರ ಗುರುವಾರ, ಮೂರು ಮಹತ್ವದ ಕನಸುಗಳ ಚಾಲನೆಗೆ ಮುಹೂರ್ತವೊದಗಿಸಿದ ದಿನ. ಸೈಬರ್‌ ಅಪರಾಧಗಳ ವಿಚಾರಣೆಯ ಪೊಲೀಸ್‌ ಠಾಣೆ, ಕರ್ನಾಟಕ ಹಾಲು ಮಹಾಮಂಡಳಿ ಬೆಳ್ಳಿಹಬ್ಬದ ಅಂಗವಾಗಿ ರೂಪುಗೊಂಡ ‘ಮೆಗಾಡೇರಿ’ ಉದ್ಘಾಟನೆ ಹಾಗೂ ವಿಧಾನಸೌಧ ಸೌತ್‌ಬ್ಲಾಕ್‌ ಕಟ್ಟಡದ ಶಂಕುಸ್ಥಾಪನೆ- ಈ ಮೂರೂ ಮಹತ್ವದ ಕಾರ್ಯಕ್ರಮಗಳಲ್ಲಿ ಪಾಲುಗೊಂಡ ಕೃಷ್ಣ ಧನ್ಯತೆಯನ್ನು ಅನುಭವಿಸಿರಬಹುದು. ಮೊನ್ನೆಯಷ್ಟೇ ಅವರು ದೇಶದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಪಟ್ಟಕ್ಕೆ ಪಾತ್ರರಾಗಿದ್ದರು ಅನ್ನುವುದನ್ನು ನೆನಪಿಸಿಕೊಳ್ಳಿ.

ಯಾರು ಹಿತವರು ಈ ಮೂವರೊಳಗೆ ಎನ್ನುವಂತೆ ಕೃಷ್ಣ ಕೇಂದ್ರವಾದ ಮೂರು ಕಾರ್ಯಕ್ರಮಗಳಲ್ಲಿ ಯಾವುದಕ್ಕೆ ಮೊದಲನೆ ರ್ಯಾಂಕ್‌ ಎನ್ನುವುದನ್ನು ನಿರ್ಣಯಿಸುವುದು ಕಷ್ಟ . ಆದರೆ, ಈ ಹೊತ್ತಿನ ನಮ್ಮ ಆಯ್ಕೆ, ‘ಸೈಬರ್‌ ಪೊಲೀಸ್‌ ಠಾಣೆ!’ ಭಾರತದ ಸಿಲಿಕಾನ್‌ ವ್ಯಾಲಿ ಮುಕುಟದಲ್ಲಿನ ಹೊಸ ಗರಿಯಿದು. ಕೃಷ್ಣ ಅವರ ಐಟಿ ಇಮೇಜ್‌ಗೆ ಸಮರ್ಥನೆ ಅನ್ನುವಂತಿರುವ ಈ ಠಾಣೆಗೆ ದೇಶದಲ್ಲೇ ಮೊದಲ ಸೈಬರ್‌ ಪೊಲೀಸ್‌ ಠಾಣೆಯೆನ್ನುವ ಅಗ್ಗಳಿಕೆ!

ಕೃಷ್ಣ- ಭಾಸ್ಕರ್‌ ಗಾರುಡಿಯಲ್ಲಿ ಮೂಡಿದ ಸೈಬರ್‌ ಪೊಲೀಸ್‌ ಠಾಣೆ

ಇತ್ತೀಚೆಗಷ್ಟೇ ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕರಾಗಿ ನೇಮಕಗೊಂಡಿರುವ ವಿ.ವಿ.ಭಾಸ್ಕರ್‌ ಪೊಲೀಸ್‌ ಇಲಾಖೆಗೆ ಆಧುನಿಕ ತಂತ್ರಜ್ಞಾನದ ಲೇಪ ಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ವಾಣಿಜ್ಯೀಕರಣದ ದಿನಗಳಲ್ಲಿ ಬಹುತೇಕ ಕ್ಷೇತ್ರಗಳು ಕಂಪ್ಯೂಟರೀಕರಣಗೊಂಡು, ಸೈಬರ್‌ ಅಪರಾಧಗಳು ಅಧಿಕವಾಗುತ್ತಿರುವ ಸಂದರ್ಭದಲ್ಲಿ ಸೈಬರ್‌ ಠಾಣೆಯ ಸ್ಥಾಪನೆ ಅರ್ಥಪೂರ್ಣ ಅಗತ್ಯವಾಗಿದೆ ಎನ್ನುತ್ತವೆ ಪೊಲೀಸ್‌ ಇಲಾಖೆಯ ಮೂಲಗಳು.

ಡಿವೈಎಸ್ಪಿ ದರ್ಜೆಯ ಅಧಿಕಾರಿಯಾಬ್ಬರು ಶಿಸ್ತುಬದ್ಧ ಕಾರ್ಯಾಚರಣೆ ಪಡೆಯ ನೆರವಿನೊಂದಿಗೆ ಸೈಬರ್‌ ಪೊಲೀಸ್‌ ಠಾಣೆಯ ಕಾರ್ಯಭಾರ ನಿರ್ವಹಿಸುತ್ತಾರೆ. ಇನ್ಫೋಸಿಸ್‌, ವಿಪ್ರೋ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಪ್ರತಿನಿಧಿಗಳು ಸೇರಿದಂತೆ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಕ್ಷೇತ್ರದ ತಜ್ಞರು ಕಾರ್ಯಾಚರಣೆ ಪಡೆಯಲ್ಲಿದ್ದು , ಸೈಬರ್‌ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ತಮ್ಮ ಪ್ರತಿಭೆಯನ್ನು ಧಾರೆ ಎರೆಯಲಿದ್ದಾರೆ.

ಸೈಬರ್‌ ಸ್ಟೇಷನ್‌ಗೆ ನೆರವು ನೀಡಲಿಕ್ಕೆಂದೇ ರಾಜ್ಯ ವಿಧಿ ವಿಜ್ಞಾನ ಇಲಾಖೆ ಪ್ರತ್ಯೇಕ ಘಟಕವೊಂದನ್ನು ರೂಪಿಸಿದೆ. ಪ್ರತಿಯಾಂದು ಸೈಬರ್‌ ಕ್ರೆೃಂ ಪರಿಹರಿಸಲು ನೀಡುವ ನೆರವಿಗೆ 10 ಸಾವಿರ ರುಪಾಯಿ ಹಾಗೂ ವಿಶೇಷ ಪ್ರಕರಣಗಳಲ್ಲಿ 50 ಸಾವಿರ ರುಪಾಯಿ ಗೌರವ ಧನ ಕಾರ್ಯಾಚರಣೆ ಪಡೆಗೆ ಸಂದಾಯವಾಗಲಿದೆ ಎನ್ನುತ್ತಾರೆ ಭಾಸ್ಕರ್‌.

ಅಗತ್ಯವಿದ್ದಲ್ಲಿ ವಿದೇಶದಲ್ಲಿ ಕಲಿಕೆಯ ಅವಕಾಶ

Laptopಸಿಓಡಿ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿರುವ ಸೈಬರ್‌ ಪೊಲೀಸ್‌ ಠಾಣೆ ಇಡೀ ರಾಜ್ಯದ ಕಾರ್ಯಾಚರಣೆ ವ್ಯಾಪ್ತಿಯನ್ನು ಹೊಂದಿದೆ. ಪೊಲೀಸ್‌ ಮಹಾ ನಿರ್ದೇಶಕರು ಹೇಳುವಂತೆ, ಆಧುನಿಕ ತಂತ್ರಜ್ಞಾನದಲ್ಲಿ ಬಲ್ಲಿದರಾದ ಅಧಿಕಾರಿಗಳನ್ನು ಅರ್ಹತೆಯಾಂದನ್ನೆ ಆಧಾರವಾಗಿರಿಸಿಕೊಂಡು ಹೊಸ ಠಾಣೆಗೆ ನಿಯೋಜಿಸಲಾಗುವುದು.

ಅಗತ್ಯವಿದ್ದಲ್ಲಿ ಠಾಣೆಯ ಸಿಬ್ಬಂದಿಯನ್ನು ತರಬೇತಿಗಾಗಿ ವಿದೇಶಕ್ಕೆ ಕಳುಹಿಸಲಾಗುವುದು ಹಾಗೂ ಕಂಪ್ಯೂಟರ್‌ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ಅವಕಾಶ ಮಾಡಿಕೊಡಲಾಗುವುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಎಲ್ಲ ಆಧುನಿಕ ಮಜಲುಗಳನ್ನೂ ಕಾಲಕಾಲಕ್ಕೆ ಠಾಣೆಯ ಸಿಬ್ಬಂದಿಗೆ ಪರಿಚಯಿಸಲಾಗುವುದು. ವಿಶೇಷ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರ ದ ಏಜೆನ್ಸಿ ಅಥವಾ ವಿಶ್ವ ವಿದ್ಯಾಲಯಗಳ ಸಿಬ್ಬಂದಿಯ ಸೇವೆಯನ್ನು ಪ್ರತಿ ನಿಯೋಜನೆ ಅಥವಾ ಒಪ್ಪಂದದ ಆಧಾರದಲ್ಲಿ ಪಡೆಯಲೂ ಹಿಂಜರಿಯುವುದಿಲ್ಲ ಎನ್ನುತ್ತಾರೆ ಭಾಸ್ಕರ್‌.

ನವದೆಹಲಿಯಲ್ಲಿನ ಸೈಬರ್‌ ಸೆಲ್‌ನೊಂದಿಗೆ ಸತತ ಸಂಪರ್ಕವನ್ನು ಹೊಂದಿರುವ ಸೈಬರ್‌ ಸ್ಟೇಷನ್‌, ಇಂಟರ್‌ಪೋಲ್‌ನೊಂದಿಗೂ ಸುದ್ದಿ ವಿನಿಮಯಕ್ಕಾಗಿ ಸಂಪರ್ಕ ಹೊಂದಲು ಉದ್ದೇಶಿಸಿದೆ.

ಕೊನೆಯದಾಗಿ-
ಸೈಬರ್‌ ಪೊಲೀಸ್‌ ಠಾಣೆ ಸ್ಥಾಪನೆಯ ಮೂಲಕ ವಿಶ್ವದ ಗಮನವನ್ನು ಮತ್ತೊಮ್ಮೆ ಬೆಂಗಳೂರಿನತ್ತ ಸೆಳೆದ ಕೃಷ್ಣ ಅವರಿಗೆ ಅಭಿನಂದನೆಗಳನ್ನು ಹೇಳೋಣ. ಅಂದಹಾಗೆ, ಕೃಷ್ಣ ಅವರ ಮುಂದಿನ ನಡೆ ಯಾವುದು!?

ಅಪರಾಧವೆಸಗಿದರೂ ಪರವಾಗಿಲ್ಲ, ಇ ಆಡಳಿತದ ಕೈಂಕರ್ಯವನ್ನು ಕಾಯಾ ವಾಚಾ ಮನಸಾ ಕಾರ್ಯರೂಪಕ್ಕೆ ತರುವುದು !!

ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+