Get Updates
Get notified of breaking news, exclusive insights, and must-see stories!

ನಾಮಪತ್ರ ಸಲ್ಲಿಸಿ ‘ಕೆಓಎ’ ಅಧ್ಯಕ್ಷ ಸ್ಥಾನಬೇಡವೆಂದರು ಕೃಷ್ಣ

ಬೆಂಗಳೂರು : ಕಳೆದ ವಾರವಷ್ಟೇ 'ಕರ್ನಾಟಕ ಒಲಂಪಿಕ್‌ ಸಂಸ್ಥೆ "(ಕೆಓಎ)ಯ ಅಧ್ಯಕ್ಷ ಪದವನ್ನು ಅಪೇಕ್ಷಿಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಈಗ ಮನಸ್ಸು ಬದಲಿಸಿದ್ದಾರೆ. 'ಕೆಓಎ" ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರೂ, ಆ ಪದವನ್ನೊಪ್ಪಲು ಕೃಷ್ಣ ಒಲ್ಲೆ ಎಂದಿದ್ದಾರೆ.

ಪ್ರಸ್ತುತ ಕೆಓಎ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ನಿರ್ಗಮಿಸುತ್ತಿರುವ ಪಿ. ಮಲ್ಲೇಶ್ವರನ್‌ ಆವರಿಗೆ ಈ ಬಗ್ಗೆ ಪತ್ರ ಬರೆದಿರುವ ಕೃಷ್ಣ - 'ರಾಜ್ಯದ ವ್ಯವಹಾರಗಳ ಕಡೆ ಗಮನ ಕೊಡಬೇಕಾಗಿರುವುದರಿಂದ ಹೊಸ ಹುದ್ದೆಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಯವರು ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿರುವುದರಿಂದ ಕೆಓಎ ಯ ಇಡೀ ಚುನಾವಣೆ ಪ್ರಕ್ರಿಯೆ ಗೊಂದಲದಲ್ಲಿ ಬಿದ್ದಿದೆ. ಪ್ರಸ್ತುತ ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಕಣದಲ್ಲಿ ಅಧಿಕೃತ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಮುಖ್ಯಮಂತ್ರಿಗಳು ಚುನಾವಣಾ ಕಣ ಪ್ರವೇಶಿಸಿದ್ದರಿಂದ ಕೆಓಎ ಯ ಎಲ್ಲಾ ಸ್ಥಾನಗಳಿಗೂ ಒಮ್ಮತದ ಅಭ್ಯರ್ಥಿಗಳನ್ನು ತರುವ ತೆರೆ ಮರೆಯ ಪ್ರಯತ್ನಗಳು ನಡೆದಿದ್ದವು.

ಒಮ್ಮತದ ಅಭ್ಯರ್ಥಿಗಳನ್ನು ತರುವ ಪ್ರಯತ್ನ ಅಧ್ಯಕ್ಷರ ಚುನಾವಣೆಯಲ್ಲಿ ಮಾತ್ರ ಯಶಸ್ವಿಯಾಗಿದೆ. ಉಳಿದ ಹುದ್ದೆಗಳ ಆಯ್ಕೆಯಲ್ಲಿ ಅಭ್ಯರ್ಥಿಗಳಲ್ಲಿ ಒಮ್ಮತ ಮೂಡದ ಕಾರಣ, ನಾಮಪತ್ರ ವಾಪಸ್ಸು ಪಡೆಯುವ ಕೊನೆಯ ದಿನವಾದ ಜೂನ್‌ 6 ರ ನಂತರವೂ ಕಣದಲ್ಲಿ ಅನೇಕ ಅಭ್ಯರ್ಥಿಗಳು ಉಳಿದಿದ್ದಾರೆ. ಆದರೆ, ಅಧ್ಯಕ್ಷ ಸ್ಥಾನದ ಕಣ ಮಾತ್ರ ಖಾಲಿಯಾಗಿದೆ. ಮುಂದೇನು ಅನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ .

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+