ಭಾರೀ ಬಿಸಿಲು ಮಳೆ ! ಕನ್ನಂಬಾಡಿಯಲ್ಲಿ ನೀರಿನ ಮಟ್ಟ ಕುಸಿತ
ಅನೇಕ ದಿನಗಳಿಂದ ಮಳೆಯ ಬದಲು ಧಾರಾಕಾರ ಬಿಸಿಲೇ ಸುರಿಯುತ್ತಿರುವುದರಿಂದ ಕೃಷ್ಣರಾಜ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು , ಕಳೆದ 10 ದಿನಗಳಲ್ಲಿ ಜಲಾಶಯದ ನೀರಿನ ಮಟ್ಟ 5 ಅಡಿಗಳಷ್ಟು ಕುಸಿದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ.
ಮೇ ತಿಂಗಳ ಮೊದಲ ವಾರದಲ್ಲಿ ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು . ಈ ಅನಿರೀಕ್ಷಿತ ನೀರಿನ ಸಂಗ್ರಹದ ಸಂತಸ ರೈತರಿಗೆ ತುಂಬಾ ದಿನ ಉಳಿಯಲಿಲ್ಲ . ಮಳೆಯ ನಂತರದ ಬಿಸಿಲಿನ ಕಾರಣದಿಂದಾಗಿ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ.
ಬೇಸಿಗೆ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯವಿದ್ದು ಪ್ರತಿನಿತ್ಯ 991 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಆದರೆ, ಜಲಾಶಯದ ಒಳ ಹರಿವಿನ ಪ್ರಮಾಣ 306 ಕ್ಯೂಸೆಕ್ಸ್ ಮಾತ್ರ. ಮಂಡ್ಯ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ಹಾಗೂ ಮೈಸೂರು ನಗರಕ್ಕೆ ಕೆಆರ್‌ಎಸ್ ಅಣೆಕಟ್ಟೆಯಿಂದಲೇ ನೀರು ಪೂರೈಸಲಾಗುತ್ತಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications