ಬಡ್ತಿಯಲ್ಲಿ ಮೀಸಲಾತಿ, ಕೋರ್ಟ್ ಆದೇಶಕ್ಕೆ ಸರ್ಕಾರ ಬದ್ಧ
ಗುಲ್ಬರ್ಗಾ : ಬಡ್ತಿ ನೀಡುವ ಸಂದರ್ಭದಲ್ಲಿ ಮೀಸಲಾತಿ ನೀಡುವ ನ್ಯಾಯಾಲಯದ ಆದೇಶವನ್ನು ಗಡುವು ಮುಗಿಯುವ ಮುನ್ನ ಜಾರಿಗೆ ತರುವುದಾಗಿ ರಾಜ್ಯ ಲೋಕೋಪಯೋಗಿ ಸಚಿವ ಧರಮ್ ಸಿಂಗ್ ಹೇಳಿದ್ದಾರೆ.
ಗುರುವಾರ, ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸರಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಬೇರೆ ವಿಧಿಯೇ ಇಲ್ಲ ಎಂದರು. ಆದೇಶವನ್ನು ಪಾಲಿಸಲು ಕೋರ್ಟ್ ಮೇ 31ರ ಗಡುವು ನೀಡಿದೆ. ಕೋರ್ಟ್ ಆದೇಶವನ್ನು ಪಾಲಿಸುವ ಸಂದರ್ಭದಲ್ಲಿ , ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತಾಸಕ್ತಿಯನ್ನು ಸರಕಾರ ಪಾಲಿಸುತ್ತದೆ ಎಂದು ಸಚಿವರು ವಿವರಿಸಿದರು.
ಬುಧವಾರವಷ್ಟೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವರ್ಗಗಳಿಗೆ ಸೇರಿದ ರಾಜ್ಯ ಸರಕಾರೀ ನೌಕರರು, ಬಡ್ತಿಗೆ ಸಂಬಂಧಿಸಿದ ಕೋರ್ಟ್ ಆದೇಶವನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿ ರ್ಯಾಲಿ ನಡೆಸಿದ್ದರು.
(ಇನ್ಫೋ ವಾರ್ತೆ)












Click it and Unblock the Notifications