ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ ಟೆಸ್ಟ್‌ : ಸಚಿನ್‌ 76, ಭಾರತ 176, ಆಸ್ಟ್ರೇಲಿಯಾ 49/1

By Super
|
Google Oneindia Kannada News

ಮುಂಬಯಿ : ಮಂಗಳವಾರ ಪ್ರಾರಂಭವಾದ ಮೊದಲ ಟೆಸ್ಟ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನ 176 ರನ್‌ಗಳ ಅಗ್ಗದ ಸ್ಕೋರಿಗೆ ಉತ್ತರವಾಗಿ ದಿನದಾಟ ಮುಗಿದಾಗ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 16 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 48 ರನ್‌ ಗಳಿಸಿತ್ತು.

ಮೆಕ್‌ಗ್ರಾತ್‌ ಹಾಗೂ ಶೇನ್‌ ವಾರ್ನ್‌ ದಾಳಿಗೆ ದಿಟ್ಟ ಉತ್ತರ ಕೊಡಲಾಗದ ಭಾರತ ಕಳಪೆ ಆಟ ಪ್ರದರ್ಶಿಸಿತು. ಭಾರತದ ಪರ ಸಚಿನ್‌ (76) , ವಿವಿಎಸ್‌ ಲಕ್ಷ್ಮಣ್‌ (20) ಹಾಗೂ ನಯನ್‌ ಮೊಂಗಿಯಾ (26) ಬಿಟ್ಟರೆ ಉಳಿದವರ್ಯಾರೂ 20ರ ಗಡಿ ಮುಟ್ಟಲಿಲ್ಲ. ಡೇಮಿಯನ್‌ ಫ್ಲೆಮಿಂಗ್‌ಗೆ ತಡಕಿ ನೋಡಿಕೊಳ್ಳುವಂತೆ ಚಚ್ಚಿದ ತೆಂಡೂಲ್ಕರ್‌ ಆಟವೊಂದೇ ಮೊದಲ ದಿನ ಭಾರತದ ಪರ ಮೆಲುಕು ಹಾಕುವಂಥದ್ದು. 13 ಬೌಂಡರಿಗಳೊಂದಿಗೆ ಭರವಸೆಯಿಂದ ಆಡುತ್ತಿದ್ದ ತೆಂಡೂಲ್ಕರ್‌ ವಿಕೆಟ್‌ ಕಿತ್ತದ್ದು ದಿನವಿಡೀ ಮಿಂಚಿದ ಮೆಕ್‌ಗ್ರಾತ್‌, ಅದು ತಮ್ಮ 3ನೇ ಸ್ಪೆಲ್‌ನಲ್ಲಿ.

ಪ್ರಮುಖ ಆಟಗಾರರಾದ ರಮೇಶ್‌, ತೆಂಡೂಲ್ಕರ್‌ ಹಾಗೂ ಲಕ್ಷ್ಮಣ್‌ ವಿಕೆಟ್‌ಗಳನ್ನು ಮೆಕ್‌ಗ್ರಾತ್‌ ಕಿತ್ತರೆ, ಗಂಗೂಲಿ, ಅಗರ್ಕರ್‌, ಶ್ರೀನಾಥ್‌ ಹಾಗೂ ಹರ್ಭಜನ್‌ ಸಿಂಗ್‌ರನ್ನು ವಾರ್ನ್‌ ಪೆವಿಲಿಯನ್‌ಗೆ ಕಳುಹಿಸಿದರು. 19 ಓವರ್‌ಗಳಲ್ಲಿ 13 ಮೇಡನ್‌ ಗಳಿಸಿದ ಮೆಕ್‌ಗ್ರಾತ್‌ ನೀಡಿದ್ದು ಕೇವಲ 19 ರನ್‌. 7 ಮೇಡನ್‌ಗಳಿದ್ದ 22 ಓವರ್‌ಗಳಲ್ಲಿ ವಾರ್ನ್‌ 47 ರನ್ನಿತ್ತರು.

ಉತ್ತಮವಾಗೇ ಬೌಲ್‌ ಮಾಡಲಾರಂಭಿಸಿದ ಭಾರತದ ಶ್ರೀನಾಥ್‌ ಹಾಗೂ ಅಗರ್ಕರ್‌ಗೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಸಮಸ್ಯೆಯಾದರು. ಒಮ್ಮೆ ಅಗರ್ಕರ್‌ ಎಸೆತಕ್ಕೆ ಸ್ಲೇಟರ್‌ ಕಾಟ್‌ ಬಿಹೈಂಡ್‌ ಆದರೂ ಅಂಪೈರಿಂದ ಜೀವದಾನ ಪಡೆದರು ! ಹೊಸ ಮೊನಚನ್ನು ಕಂಡುಕೊಂಡಿರುವ ಅಗರ್ಕರ್‌ ಕೊನೆಗೂ ಸ್ಲೇಟರನ್ನು ಕ್ಲೀನ್‌ ಬೌಲ್ಡ್‌ ಮಾಡುವಲ್ಲಿ ಯಶಸ್ವಿಯಾದರು. 29 ರನ್‌ ಗಳಿಸಿರುವ ಹೇಡನ್‌ ಮತ್ತು 9 ರನ್‌ ಗಳಿಸಿರುವ ಜಸ್ಟಿನ್‌ ಲ್ಯಾಂಗರ್‌ ಬುಧವಾರ ಆಟ ಮುಂದುವರೆಸಲಿದ್ದಾರೆ.

English summary
Tendulkars stright drives, McGrath and Warns magical delivering are the highlights of the day I of Pepsi test seriess 1st test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X