ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ವ್ಯಸ್ತ ಕೆಲಸಗಳು ತಲೆ ತಿನ್ನುತ್ತಿವೆ ಅಂತ ಸಿಕ್ಕಾ ಪಟ್ಟೆ ಕಿರಿಕಿರಿಮಾಡಿಕೊಳ್ಳಬೇಡಿ. ಹಣದ ವ್ಯವಹಾರದಲ್ಲಿ ಗೆಲುವು ಸಿಗಲಿದೆ. ಆದ್ದರಿಂದ ಸದ್ಯದಲ್ಲಿಯೇ ಸಂತಸದ ದಿನ ಬರಲಿದೆ.

ವೃಷಭ : ಗೆಳೆಯರೊಡನೆ ಕಚ್ಚಾಡಿದರೆ ಎಲ್ಲವೂ ಸಲೀಸಾಗಿ ನಡೆಯುವುದಿಲ್ಲ ಮಾರಾಯರೇ. ಆದ್ದರಿಂದ ಮನೆಯವರ ಸಹಾಯದಿಂದಲಾದರೂ ಗೆಳೆಯರನ್ನು ಒಲಿಸಿಕೊಳ್ಳಿ. ಆಫೀಸಿನಲ್ಲಿ ಪ್ರೊಮೋಷನ್‌ ಸುದ್ದಿ ಏನಾದರೂ ಬಂದಿದ್ದರೇ ಅದು ನಿಮ್ಮದಾಗುವ ಸಾಧ್ಯತೆ ಇದೆ.

ಮಿಥುನ : ನಿಮ್ಮ ಹುಚ್ಚು ಮನಸ್ಸಿನಿಂದ ಮನೆಯವರ ದಿನವನ್ನು ಹಾಳುಮಾಡಬಾರದಲ್ವೇ ? ಕೆಟ್ಟದ್ದನ್ನು ಮರೆಯುವುದು ನಿಮಗೇನೂ ಕಷ್ಟವಾಗಲಿಕ್ಕಿಲ್ಲ ಎಂಬ ವಿಶ್ವಾಸ ಇರಲಿ.

ಕಟಕ : ವಿದ್ಯೆಗೆ ವಿಘ್ನ ಬಂದರೆ ವ್ಯವಹಾರ ಕ್ಷೇತ್ರದತ್ತ ಹೆಚ್ಚು ಗಮನ ಹರಿಸಬಹುದಲ್ಲ ? ಹೊಸ ಗೆಳೆಯರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು. ಅಧ್ಯಾತ್ಮದತ್ತ ಇರುವ ಒಲವು, ಕೈಯಲ್ಲಿರುವ ಹಣ ಖಾಲಿ ಮಾಡಬಹುದು.

ಸಿಂಹ : ನಿಮ್ಮದು ಬಿಸಿನೆಸ್‌ ಲೈನಾ... ಹಾಗಾದರೆ ನೀವೇ ಲಕ್ಕಿ ಇವತ್ತು. ಮಾತು ಸುಂದರವಾಗಿದ್ದರೆ ಎಲ್ಲ ಆಫರ್‌ಗಳೂ ನಿಮ್ಮ ಟೇಬಲ್‌ಗೇ ಬಂದು ಬೀಳುತ್ತವೆ. ಕೌಟುಂಬಿಕ ಅಡೆತಡೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅವೆಲ್ಲಾ ತಾತ್ಕಾಲಿಕ ಅಂತ ಗೊತ್ತಲ್ವ?

ಕನ್ಯಾ : ಮನೆ ಮಂದಿಯಾಂದಿಗೆ ಕಳೆದ ಸಂತೋಷದ ದಿನಗಳ ಬಗ್ಗೆ ಕನಸು ಕಾಣುತ್ತಲೇ ಇರುತ್ತೀರಿ. ಹೊಸ ಒಪ್ಪಂದಗಳು ಬಂದಲ್ಲಿ ಕೈ ಬಿಡಬೇಡಿ. ಆದರೆ ಕೂಲಂಕುಷವಾಗಿ ಪರಿಶೀಲಿಸಿ ಹ್ಞೂಂಗುಟ್ಟಬೇಕು.

ತುಲಾ : ಉನ್ನತ ವ್ಯಾಸಂಗದಲ್ಲಿ ಮತ್ತಷ್ಟು ಪ್ರಗತಿ ಕಾಣುತ್ತೀರಿ. ಏಕಾಗ್ರತೆ ಸಾಧಿಸಿದರೆ ನಿಮ್ಮ ಕೆಲಸಗಳು ಅರ್ಧ ಆದಂತೆಯೇ ಎಂಬುದು ನಿಮಗೆ ಗೊತ್ತಿದೆ ತಾನೇ ? ಅನಾರೋಗ್ಯದ ಸಮಸ್ಯೆ ಬಾರದಂತೆ ಎಚ್ಚರವಿರಲಿ.

ವೃಶ್ಚಿಕ : ಬಂಧುಗಳಿಂದ ನೋವಾಗಿದೆ ಅಂತ ಸುಮ್ಮನಿರುವುದೇ ? ಈ ಬಾರಿ ಉದಾರವಾಗಿ ಕ್ಷಮಿಸಿಬಿಡಿ. ಪ್ರಯಾಣ ಯೋಗವನ್ನು ಕೈಯಾರ ಮುಂದೂಡುತ್ತೀರಲ್ಲಾ. ಮನಸ್ಸು ತಿಳಿಯಾಗದೇ ?

ಧನಸ್ಸು : ಇವತ್ತೆಲ್ಲಾ ನಿಮ್ಮ ಸ್ನೇಹಿತರೊಟ್ಟಿಗೆ ಹರಟೆ ಹೊಡೆಯುವುದೇ ಆಗಿ ಹೋಗುತ್ತದೆ. ಲೋಕದ ಸುದ್ದಿಗಳ ನಡುವೆ ನಿಮ್ಮ ಉದ್ದೇಶಗಳನ್ನು ಮರೆಯಬೇಡಿ. ಪಿಕ್‌ನಿಕ್‌ ಯೋಜನೆಯೇನಾದರೂ ಇದ್ದರೆ, ಇದು ಸರಿಯಾದ ಸಮಯ.

ಮಕರ : ಮನೆ ಬದಲಿಸುವ ಯೋಚನೆಯಿದ್ದರೆ ಸದ್ಯಕ್ಕೆ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ಎಷ್ಟೋ ದಿನಗಳಿಂದ ಪಕ್ಕಕ್ಕಿರಿಸಿದ ಕೆಲಸದ ಬಗ್ಗೆಯೂ ಸ್ವಲ್ಪ ಗಮನವಿರಲಿ.

ಕುಂಭ : ಮೂಡ್‌ ಹಾಳು ಮಾಡಿಕೊಂಡು ದಿನವನ್ನು ಶಪಿಸಬೇಡಿ. ವಸ್ತ್ರಾಭರಣ ಖರೀದಿ ಯೋಗವಿರುವುದರಿಂದ ಮನೆಯವರೊಂದಿಗಿನ ವಿರಸವನ್ನು ಬಿಟ್ಟು ಬಿಡಿ. ಲಾಭವಾಗಲಿದೆ.

ಮೀನ : ಅನಿರೀಕ್ಷಿತ ನೆಂಟರು ಬಂದರೆ ಸತ್ಕಾರ ಭಾಗ್ಯವನ್ನು ನೆನೆದು ಸಂತೋಷಪಡಿ. ಮತ್ತೊಂದು ಸುಳ್ಳು ಸೃಷ್ಟಿಸುವುದನ್ನು ನೋಡಿ ಸ್ನೇಹಿತರು ಬೆಪ್ಪಾಗುತ್ತಾರೆ. ಬಂಧುಗಳಿಂದ ಸಹಾಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+