ಮೊದಲ ಟೆಸ್ಟ್ : ಜೋಷಿಗೆ ಕೊಕ್, ಹಿರ್ವಾನಿಗೆ ಬುಲಾವ್
ನವದೆಹಲಿ : ಫೆ. 27 ರಿಂದ ಮುಂಬಯಿಯಲ್ಲಿ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ 14 ಮಂದಿಯ ಭಾರತ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ. ಇತ್ತೀಚೆಗೆ ನಡೆದ ಜಿಂಬಾಬ್ವೆ ವಿರುದ್ಧದ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಕರ್ನಾಟಕದ ಆಲ್‌ರೌಂಡರ್ ಸುನಿಲ್ ಜೋಷಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಕರ್ನಾಟಕದ ಜಾವಗಲ್ ಶ್ರೀನಾಥ್ ಹಾಗೂ ರಾಹುಲ್ ದ್ರಾವಿಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲಿಗೆ ಭಾರತ ತಂಡದ ಅರ್ಧ ಭಾಗವನ್ನು ಆಕ್ರಮಿಸಿಕೊಂಡಿದ್ದ ಕರ್ನಾಟಕದ ಅಧಿಪತ್ಯ ಇಲ್ಲವಾಗಿದೆ.
ನರೇಂದ್ರ ಹಿರ್ವಾನಿ ಮತ್ತೊಮ್ಮೆ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಲ್ಲಕ್ಕಿಂಥಾ ಆಶ್ಚರ್ಯಕರ ಆಯ್ಕೆಯೆಂದರೆ ಮೋಸದಾಟ ಪ್ರಕರಣದಲ್ಲಿ ಇತ್ತೀಚೆಗೆ ತಾನೆ ನಿರ್ದೋಷಿಯೆಂದು ಘೋಷಿಸಲಾದ ವಿಕೆಟ್ ಕೀಪರ್ ಮೊಂಗಿಯಾ ಆಯ್ಕೆ. ಭರವಸೆಯ ಕೀಪರ್ ವಿಜಯ್ ದಹಿಯಾ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ತಂಡ ಇಂತಿದೆ : ಸೌರವ್ ಗಂಗೂಲಿ (ನಾಯಕ), ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಶಡಗೋಪನ್ ರಮೇಶ್, ಶಿವ ಸುಂದರ್ ದಾಸ್, ವಿವಿಎಸ್ ಲಕ್ಷ್ಮಣ್, ಹೇಮಾಂಗ್ ಬದಾನಿ, ನಯನ್ ಮೊಂಗಿಯಾ, ಜಹೀರ್ ಖಾನ್, ಅಜಿತ್ ಅಗರ್ಕರ್, ರಾಹುಲ್ ಸಾಂಘ್ವಿ , ಹರ್ಬಜನ್ ಸಿಂಗ್, ನರೇಂದ್ರ ಹಿರ್ವಾನಿ ಹಾಗೂ ಜಾವಗಲ್ ಶ್ರೀನಾಥ್.
(ಇನ್ಫೋ ವಾರ್ತೆ)












Click it and Unblock the Notifications