Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ಮಗನ ಹತ್ತಿರ ಜಗಳವಾಗಬಹುದು. ಮನೆಗೆ ಸಂಬಂಧಿಸಿದಂತೆ ನಡೆಯುವ ವಾಗ್ಯುದ್ಧದಲ್ಲಿ ನೀವು ಸೋತರೆ ಸುಮ್ಮನೇ ಮುಖ ಊದಿಸಿಕೊಳ್ಳಬೇಡಿ. ಆಫೀಸಿನಲ್ಲಿಯೂ ಮೂಡ್‌ ಔಟ್‌ ಮಾಡಿಕೊಂಡರೆ ದಿನ ಚೆಂದ ಇರುತ್ತದಾ?

ವೃಷಭ : ನಿಮ್ಮ ವ್ಯಾಸಂಗಕ್ಕೆ ಭಂಗ ಬಹಬಹುದು. ಲಾಟರಿ ಗೀಟರಿ ವ್ಯವಹಾರವಾದರೆ ಇವತ್ತು ಲಕ್‌ ಉಂಟು. ಹಾಗಂತ ಕೈ ಸಡಿಲ ಮಾಡಬೇಡಿ. ನೀವು ಮುಗಿಸಬೇಕಾದ ಜವಾಬ್ದಾರಿಗಳನ್ನು ಮರೆತಿದ್ದೀರಾ?

ಮಿಥುನ : ಎಡವಿದರೆ, ಗಾಯಕ್ಕೆ ಮದ್ದು ಹಚ್ಚಿಕೊಳ್ಳಬೇಕು. ಬೇಸರ ತಂದುಕೊಂಡರೆ ನಿಮಗೂ ತೊಂದರೆ, ನಿಮ್ಮ ಸ್ನೇಹಿತರಿಗೂ ತೊಂದರೆ. ಆಫೀಸಿನಲ್ಲಿ ಖುಷಿಯ ದಿನ. ಆಭರಣ ಧರಿಸುವ ಯೋಗವಿದೆ.

ಕಟಕ : ಆರ್ಥಿಕ ಮುಗ್ಗಟ್ಟಿನಿಂದ ರೋಧಿಸುತ್ತಿರುವ ನಿಮಗೆ ಬಂಧು ಮಿತ್ರರ ನೆರವಿನ ಸುದ್ದಿ ಸಿಗುತ್ತದೆ. ತುಂಬಾ ದಿನದಿಂದ ಪಕ್ಕಕ್ಕೆ ಸರಿಸಿರುವ ಕೆಲಸಗಳಿಗೆ ಇವತ್ತು ಚಾಲನೆ ದೊರೆಯಲಿದೆ.

ಸಿಂಹ : ಕೆಲಸ ಮಾಡುವ ಮೂಡ್‌ ಇಲ್ಲ ಅಂತ ಮೌನವಾದರೆ ನಿಮ್ಮ ಬಳಿ ಬಂದಿರುವ ಗೆಲುವು ದೂರ ಹೋಗಿಬಿಡುತ್ತದೆ. ಆದ್ದರಿಂದ ಸೋಮಾರಿತನ ಬೇಡ. ಕಮಾನ್‌, ಬಿ ಆ್ಯಕ್ಟಿವ್‌.

ಕನ್ಯಾ : ಕೋರ್ಟ್‌ ನೋಟೀಸೇನಾದರೂ ಬರುವುದಿದೆಯೋ ? ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. ಹಣ ಲಾಭವಾಗಬಹುದು. ಕುಟುಂಬದಲ್ಲಿನ ನೆಮ್ಮದಿ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ.

ತುಲಾ : ಖುಷಿಯ ಭರದಲ್ಲಿ ಬಾಯಿ ತಪ್ಪಿ ಮಾತನಾಡಬೇಡಿ. ಸ್ನೇಹಿತರ ಸಿಟ್ಟಿಗೆ ಗುರಿಯಾಗುತ್ತೀರಿ. ಮನೆಯಲ್ಲಿ ಶುಭ ಕಾರ್ಯ ನಡೆಸಬೇಕು ಎಂಬ ನಿಮ್ಮ ಯೋಜನೆ ಸದ್ಯಕ್ಕೆ ಕೈಗೂಡದಿದ್ದರೂ ಆ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಕೈ ಬಿಡಬೇಡಿ.

ವೃಶ್ಚಿಕ : ನೀವು ಕಾಣುತ್ತಿರುವ ಕನಸು ಸದ್ಯದಲ್ಲಿಯೇ ಕೈಗೂಡಲಿದೆ. ಆ ಮುನ್ಸೂಚನೆಯಿಂದಲೇ ಉಲ್ಲಸಿತರಾಗಿದ್ದೀರಿ. ಆಫೀಸಿನಲ್ಲಿ ರಾಶಿ ಬಿದ್ದಿರುವ ಕೆಲಸಗಳು ಮತ್ತು ಸಹಕರಿಸದ ಸಹೋದ್ಯೋಗಿಗಳಿಂದ ಬೇಜಾರು ಮಾಡಿಕೊಳ್ಳಬೇಡಿ.

ಧನಸ್ಸು : ಎಂದೋ ಸಾಲ ಮಾಡಿ ಮರೆತುಬಿಟ್ಟಿದ್ದೀರಾ ಅಂತ ನೆನಪಿಸಿಕೊಳ್ಳಿ. ವಿನಾ ಕಲಹ ಎದುರಿಸುವ ಮುನ್ನ ಎಲ್ಲವನ್ನು ಚುಕ್ತ ಮಾಡುವುದು ಒಳ್ಳೆಯದಲ್ವ ? ನೆಂಟರು ಬಂದರೆ ಮುಖ ಸಿಂಡರಿಸಿಕೊಳ್ಳಬಾರದು.

ಮಕರ : ನೌಕರಿಯ ಬಗ್ಗೆ ಸಂತೋಷದಿಂದ ಇರುತ್ತೀರಿ. ಹಣ ಹಾಳು ಮಾಡಿಕೊಂಡರೆ ನಂತರ ಪಶ್ಚಾತ್ತಾಪ ಪಡಬೇಕಾದೀತು. ಸಾಲ ಕೊಡುವಾಗ ಎರಡು ಬಾರಿ ಯೋಚಿಸಿ.

ಕುಂಭ : ಪತ್ನಿಯ ಅನಾರೋಗ್ಯ ನಿಮ್ಮನ್ನು ಕಂಗೆಡಿಸುತ್ತದೆ. ಆದರೆ ನೀವು ಭಯ ಪಟ್ಟುಕೊಂಡಷ್ಟು ಪರಿಸ್ಥಿತಿ ಕೆಟ್ಟು ಹೋಗಿಲ್ಲ. ಗೆಳೆಯರೊಂದಿಗೆ ಜಗಳ ಬೇಡ . ಅವರು ನಿಮ್ಮ ಒಳ್ಳೆಯದನ್ನೇ ಬಯಸುತ್ತಿರುತ್ತಾರೆ ಅಂತ ಮರೆಯಬೇಡಿ.

ಮೀನ : ನಿಮ್ಮ ಕ್ಷಣ ಚಿತ್ತ ಕ್ಷಣ ಪಿತ್ತ ಬುದ್ಧಿ ಅರ್ಥವಾಗದೇ ಸ್ನೇಹಿತರು ಕಕ್ಕಾಬಿಕ್ಕಿಯಾಗುತ್ತಾರೆ. ಆದರೂ ನೀವು ಸದ್ಯಕ್ಕೆ ಆರಾಮವಾಗಿರುತ್ತೀರಿ. ನೌಕರಿಯಲ್ಲಿ ನಿಮ್ಮದೇ ಕಾರುಬಾರು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+