ಮುಂದಿನ ವರ್ಷದಿಂದ ಬೆಂಬಲ ಬೆಲೆ ಖರೀದಿ ಇಲ್ಲ

ಬೆಂಗಳೂರು : ಧಾನ್ಯಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸುವುದರಿಂದ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುವುದರಿಂದ ಮುಂದಿನ ವರ್ಷದಿಂದ ಬೆಂಬೆಲ ಬೆಲೆ ಖರೀದಿಯನ್ನು ಕೈ ಬಿಡಲು ಕೇಂದ್ರ ಸರಕಾರ ಉದ್ದೇಶಿಸಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಶಾಂತ ಕುಮಾರ್‌ ಈ ವಿಷಯವನ್ನು ತಿಳಿಸಿದ್ದು, ಇತ್ತೀಚಿನ ಮೂರು ತಿಂಗಳ ಅವಧಿಯಲ್ಲಿ ಕೇಂದ್ರ ಆಹಾರ ನಿಗಮವು ರಾಜ್ಯದಲ್ಲಿ ಮೆಕ್ಕೆ ಜೋಳ, ರಾಗಿ ಮತ್ತು ಭತ್ತ ಮತ್ತಿತರ ಧಾನ್ಯಗಳನ್ನು ಖರೀದಿಸಿದೆ. ಈ ಅವಧಿಯಲ್ಲಿ ಸುಮಾರು 200 ಕೋಟಿ ರೂಪಾಯಿ ಹಣ ರೈತರನ್ನು ತಲುಪಿದೆ ಎಂದು ಹೇಳಿದರು.

ಇದಕ್ಕೆ ಬದಲಾಗಿ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮಗಳೇ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸುವುದು ಮತ್ತು ವಿತರಣೆ ಮತ್ತು ಖರೀದಿ ನಡುವಣ ಅಂತರವನ್ನು ಮಾತ್ರ ಕೇಂದ್ರ ಸರಕಾರ ಭರಿಸಿಕೊಡುವುದು ಸಾಮಾನ್ಯವಾಗಿ ಅನುಸರಿಸಿಕೊಂಡು ಬರುವ ಕ್ರಮ. ಆದರೆ ಈ ಬಾರಿ ಎಲ್ಲ ಬೆಳೆ ಹಾನಿಗೂ ಭಾರತೀಯ ಆಹಾರ ನಿಗಮವೇ ಸ್ಪಂದಿಸಿದೆ. ರಾಜ್ಯ ಸರಕಾರದ ಕ್ರಮ ಬರೇ ಶೂನ್ಯ ಎಂದ ಶಾಂತಕುಮಾರ್‌ ಇಂದರಿಂದ ಕೇಂದ್ರ ಆಹಾರ ನಿಗಮದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂದು ವಿವರಿಸಿದರು.

(ಇನ್ಫೋ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+