ಯಥಾಶಕ್ತಿ ನೆರವು : ದಿನಾಂಕ 01.02.2001 ರವರೆಗೆ
- ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ನಗರದ ಡಾಕ್ಟರುಗಳು, ವಕೀಲರು ಮತ್ತು ಉದ್ಯಮಿಗಳು ನಗರಾದ್ಯಂತ ಸಂಚರಿಸಿ ಗುಜರಾತ್ ಭೂಕಂಪ ಪರಿಹಾರ ನಿಧಿ ಸಂಗ್ರಹಿಸಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಮೂಲಕ ನೆರವು ಕಳುಹಿಸಲಿದ್ದಾರೆ.
- ಬೆಂಗಳೂರಿನ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ಗುಜರಾತ್ ಭೂಕಂಪದಲ್ಲಿ ಹಾನಿಗೊಳಗಾದವರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡಲು ನಿರ್ಧರಿಸಿದೆ. ಆಸ್ಪತ್ರೆಯ ಫೋನ್ ನಂ : 080- 2254639/40/41, ಮೊಬೈಲ್ 98440-88995
- ಬೆಂಗಳೂರಿನ ಕರುಣಾಶ್ರಯ ಕ್ಯಾನ್ಸರ್ ರೋಗಿಗಳ ಆಶ್ರಮವು ಕಾರ್ನಿವಲ್-2001 ಕಾರ್ಯಕ್ರಮದಡಿ , ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಪರ್ಧೆಗಳನ್ನು ಫೆ.2ರಂದು ಆಯೋಜಿಸಿದೆ. ಈ ಮೂಲಕ ಸಂಗ್ರಹಿಸಲಾಗುವ ಹಣವನ್ನು ಗುಜರಾತ್ ಪರಿಹಾರ ನಿಧಿಗೆ ನೀಡಲಿದೆ. ಸಂಪರ್ಕಿಸಲಿಚ್ಚಿಸುವವರು 080- 8476133 ನಂಬರಿಗೆ ಫೋನಾಯಿಸಬಹುದು.
- ಅಪೆಕ್ಸ್ ಬ್ಯಾಂಕ್, ಎನ್‌ಜಿಇಎಫ್ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗ ಅಭಿವೃದ್ಧಿ ನಿಗಮ ನೌಕರರ ಸಂಘ ಗುಜರಾತ್ ಭೂಕಂಪ ಪರಿಹಾರ ನಿಧಿಗೆ 19. 54 ಲಕ್ಷ ರೂಪಾಯಿ ನೀಡಿದೆ.
- ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ. ಧನಂಜಯ ಕುಮಾರ್ ಅವರ ಸಂಸದರ ನಿಧಿಯಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಲಕ್ಷ ರೂಪಾಯಿ.
- ನಗರದ ಭಾರತೀನಗರ ವಿಧಾನ ಸಭಾ ಕ್ಷೇತದ ಪೀಪಲ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ 20 ಮಂದಿ ಸದಸ್ಯರು ಅಗತ್ಯ ಸಾಮಗ್ರಿಗಳೊಂದಿಗೆ ಗುಜರಾತಿಗೆ ತೆರಳಿದ್ದಾರೆ.
- ಬೆಂಗಳೂರು ಉತ್ತರ ತಾಲ್ಲೂಕಿನ ಕಾಕೋಳು ಗ್ರಾಮದ ಸರಕಾರಿ ಪ್ರೌಢ ಶಾಲೆಯಿಂದ 1001 ರೂಪಾಯಿ
- ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ 25 ಸಾವಿರ ರೂಪಾಯಿ ದೇಣಿಗೆ, ನಗರ ಸಭಾ ನೌಕರರ ಒಂದು ದಿನದ ವೇತನ, ಹಾಗೂ ನಗರ ಸಭೆಯಿಂದ ಐದು ಲಕ್ಷ ರೂಪಾಯಿ.
- ಭಾರತೀಯ ಜನತಾ ಪಕ್ಷದ ಪರವಾಗಿ ಕೇಂದ್ರ ಸಂಸ್ಕೃತಿ ಖಾತೆ ಸಚಿವ ಅನಂತಕುಮಾರ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಬೆಂಗಳೂರಿನ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ, ಭೂಕಂಪ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಿದರು.
More From
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications