Get Updates
Get notified of breaking news, exclusive insights, and must-see stories!

ಮಂಗಳವಾರದೊಳಗೇ ರಾಜ್‌ ಬಿಡುಗಡೆ - ಕರುಣಾನಿಧಿ ಭರವಸೆ

ಚೆನ್ನೈ : ಸಂಧಾನಕಾರ ಗೋಪಾಲ್‌ಗೆ ರಾಜ್‌ ಹಾಗೂ ಇತರೆ ಇಬ್ಬರು ಒತ್ತೆಯಾಳುಗಳನ್ನು ಮಂಗಳವಾರದೊಳಗೆ ಬಿಡಿಸಿಕೊಂಡು ಬರುವ ವಿಶ್ವಾಸ ಈಗಲೂ ಇದೆ. ಆದರೆ ಅವರ 5ನೇ ಯಾತ್ರೆಗೆ ವೀರಪ್ಪನ್‌ ಗ್ರೀನ್‌ ಸಿಗ್ನಲ್‌ ಕೊಡಬೇಕಷ್ಟೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿರುವ ಮಾತಿದು. ಗೋಪಾಲ್‌, ವೀರಪ್ಪನ್‌ ಮನವೊಲಿಸಲು ಹೆಚ್ಚೂಕಮ್ಮಿ ಯಶಸ್ವಿಯಾಗಿದ್ದರು. ಆದರೆ ಬುಧವಾರ ರಾತ್ರಿ ನಾಗಪ್ಪ ತಪ್ಪಿಸಿಕೊಂಡು ಬಂದಿದ್ದರಿಂದ ವೀರಪ್ಪನ್‌ ತನ್ನ ಅಡಗುತಾಣ ಬದಲಿಸುವ ಕಾರ್ಯದಲ್ಲಿ ನಿರತನಾದ. ಹೀಗಾಗಿ ಮಾತುಕತೆಗೆ ಅಡಚಣೆಯುಂಟಾಯಿತು. ಈಗಲೂ ವೀರಪ್ಪನ್‌ ಯಾವುದೇ ಗಳಿಗೆಯಲ್ಲಿ ಬೇಕಾದರೂ ಗೋಪಾಲ್‌ಗೆ ಕರೆ ಕೊಡಬಹುದು. ಕರೆ ಕೊಟ್ಟ ತಕ್ಷಣ ಗೋಪಾಲ್‌ ಕಾಡಿಗೆ ಹೋಗಿ, ಮಂಗಳವಾರದೊಳಗೆ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುತ್ತಾರೆ ಎಂಬ ಭರವಸೆಯ ಮಾತುಗಳನ್ನಾಡಿದರು.

ವೀರಪ್ಪನ್‌ಗೆ ಒತ್ತೆಯಾಳು ತಪ್ಪಿಸಿಕೊಂಡು ಬಂದದ್ದು ಕೋಪ ತರಿಸಿತ್ತು. ಆತ ತಣ್ಣಗಾಗುವವರೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎನಿಸಿದ ಕಾರಣ ನಾನು ವಾಪಸ್ಸಾದೆ. ಉಭಯ ಸರ್ಕಾರಗಳೂ ವೀರಪ್ಪನ್‌ ಬೇಡಿಕೆಗಳಿಗೆ ಸ್ಪಂದಿಸಿರುವುದು ಆತನಿಗೆ ತೃಪ್ತಿ ತಂದಿದೆ. ಟಾಡಾ ಬಂದಿಗಳ ಬಿಡುಗಡೆ ತಕರಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌ಗೆ ಸಲ್ಲಿಸಿರುವ ಮನವಿ ಪತ್ರದ ಬಗೆಗೂ ವೀರಪ್ಪನ್‌ ತೃಪ್ತಿ ವ್ಯಕ್ತಪಡಿಸಿದ್ದಾನೆ. ಅವನ ಕರೆಗೆ ಕಾಯುತ್ತಿದ್ದೇನೆ. ಕರೆದೊಡನೆಯೇ 5ನೇ ಬಾರಿಗೆ ಕಾಡಿಗೆ ಹೋಗಿ ಒತ್ತೆಯಾಳುಗಳನ್ನು ಕರೆ ತರಲು ನಾನು ಸಿದ್ಧ ಎಂದು ಗೋಪಾಲ್‌ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+