ಪ್ಲಾಸ್ಟಿಕ್ ಬಳಕೆ ನಿಷೇಧ , ಹೆಕ್ಕಿಕೋ ಚಳವಳಿ
ಮಂಗಳೂರು : ಉಡುಪಿ ಜಿಲ್ಲೆಯಲ್ಲಿ 20 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಚೀಲದ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೌರವ ಗುಪ್ತಾ ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯದಲ್ಲಿಯೇ ಉತ್ತ ಮ ನಗರ ಸಭೆ ಪ್ರಶಸ್ತಿ ಪಡೆದಿರುವ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಪ್ಲಾಸ್ಟಿಕ್ ಹಾವಳಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.
ಹೆಕ್ಕಿಕೋ ಚಳವಳಿ : ಅವಿಭಜಿತ ದಕ್ಷಿಣ ಕನ್ನಡದಲ್ಲಿ ಪ್ಲಾಸ್ಟಿಕ್ ಹೆಕ್ಕಿ ಪರಿಸರ ಸ್ವಚ್ಛಗೊಳಿಸುವ ಆಂದೋಳನವನ್ನು ಶನಿವಾರ, ಶಾಸಕ ಎನ್. ಯೋಗೀಶ್ ಭಟ್ ಉದ್ಘಾಟಿಸಿದರು. ಉಡುಪಿ ನಗರದ 20 ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಬದಲಿಗೆ ಸೆಣಬಿನ ಚೀಲಗಳು ಮತ್ತು ರದ್ದಿ ಕಾಗದಗಳನ್ನು ಬಳಸಲು ಅಂಗಡಿ ಮಾಲಿಕರಿಗೆ ಸಲಹೆ ಮಾಡಲಾಗುವುದು. ಈ ಆಂದೋಲನದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸಲಿದ್ದಾರೆ.











Click it and Unblock the Notifications