ರಂಗನತಿಟ್ಟಿನಲ್ಲಿ ದೋಣಿ ವಿಹಾರ ಸ್ಥಗಿತ
ಮೈಸೂರು : ರಂಗನ ತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ತಾತ್ಕಾ-ಲಿ-ಕ-ವಾ-ಗಿ ನಿಲ್ಲಿಸಲಾಗಿದೆ.
ಕಳೆದ ವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಕೃಷ್ಣ ರಾಜ ಸಾಗರ ಭರ್ತಿಯಾಗಿದ್ದು , ಹೆಚ್ಚುವರಿ ನೀರನ್ನು ನದಿಗೆ ಬಿಡಲಾ-ಗು-ತ್ತಿ-ದೆ. ಇದ-ರಿಂ-ದಾ-ಗಿ ಮಂಡ್ಯದ ರಂಗನತಿಟ್ಟು ಪಕ್ಷಿಧಾಮದ ತಗ್ಗು ಪ್ರದೇಶದಲ್ಲಿ ನೀರು ತುಂಬುತ್ತಿ-ದ್ದು , ಮುನ್ನೆಚ್ಚರಿಕೆ ಕ್ರಮವಾಗಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
ವಂಶಾಭಿವೃದ್ಧಿಗಾಗಿ ಪಕ್ಷಿಧಾಮಕ್ಕೆ ಬಂದಿರುವ ಪಕ್ಷಿಗಳು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆದರಿ ಕುಳಿತಿವೆ. ಯಾವುದೇ ಜಾತಿಯ ಹಕ್ಕಿಗಳಿಗೆ ಹಾನಿಯಾಗಿಲ್ಲವಾದರೂ ತಗ್ಗು ಪ್ರದೇಶದ ನೆಲದಲ್ಲಿ ಇಟ್ಟಿರುವ ಹಕ್ಕಿ ಮೊಟ್ಟೆ, ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
(ಮೈಸೂ-ರು- ಪ್ರತಿ-ನಿ-ಧಿ-ಯಿಂ-ದ)











Click it and Unblock the Notifications