ಚಾನಲ್‌ಗಳ ಮಹಾಪೂರ ವೀಕ್ಷಕರಿಗಷ್ಟೆ ಬರಭಾರತದ ಬಹುತೇಕ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಇವತ್ತು ಕನಿಷ್ಠ ಮೂರು ಚಾನೆಲ್‌ಗಳಿವೆ.
ಬೆಂಗಳೂರು : ಭಾರತದ ದೂರದರ್ಶನ ಮಾಧ್ಯಮದಲ್ಲೀಗ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಪೈಪೋಟಿಯ ತುತ್ತ ತುದಿಯಲ್ಲಿರುವ ಎಲೆಕ್ಟ್ರಾನಿಕ್ ಮಾಧ್ಯಮದ ವೈರುಧ್ಯಗಳೂ ಇದೇ ವೇಳೆಯಲ್ಲಿ ಕಣ್ಣಿಗೆ ರಾಚುತ್ತಿರುವುದು ಕೂಡ ಸುದ್ದಿಗೆ ಗ್ರಾಸವಾಗಿದೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ನಡುವಿನ ಸಮರ ಮಗಿಲು ಮುಟ್ಟಿರುವಾಗ , ತಂತ್ರಜ್ಞಾನ ಕೂಡಾ ವೇಗವಾಗಿ ಬೆಳೆಯುತ್ತಿದೆ. ಮಾಹಿತಿ ಅರುಹುವ ಎಲೆಕ್ಟ್ರಾನಿಕ್ ಮಾಧ್ಯಮದ ಹಿರಿಯಣ್ಣ ರೇಡಿಯೋ ಇನ್ನೂ ಕೂಡ ಸಮಾಜದ ಹಲವು ವರ್ಗಗಳನ್ನು ತಲುಪದೇ ಇರುವ ವಿಪರ್ಯಾಸಕ್ಕೂ ಭಾರತ ಸಾಕ್ಷಿಯಾಗಿದೆ.
ಇನ್ನು ದೂರದರ್ಶನ ಹಾಗೂ ಇಂಟರ್‌ನೆಟ್‌ನಂಥ ಅತ್ಯಾಧುನಿಕ ಮಾಧ್ಯಗಳ ಸಂಪರ್ಕ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಲಭ್ಯವಾಗಬೇಕಾದರೆ ಇನ್ನೆಷ್ಟು ಕಾಲ ಬೇಕಾಗಬಹುದು ಎಂಬುದನ್ನು ಲೆಕ್ಕಹಾಕಬೇಕಿದೆ.
ಹೊಸ ಮತ್ತು ಹಳೆಯದರ ಮಿಶ್ರಣದೊಂದಿಗೆ ಆಶ್ಚರ್ಯಕರವಾಗಿ ತಾಂತ್ರಿಕತೆ ಹೆಜ್ಜೆಹಾಕುತ್ತಿದೆ. ಆದರೆ ಟೀವಿ ಹೊಂದಿರುವ 17.5ಕೋಟಿ ಮನೆಗಳಲ್ಲಿ ಸುಮಾರು 10ಕೋಟಿ ಮನೆಗಳಿಗೆ ಉಪಗ್ರಹಚಾಲಿತ ಪ್ರಸಾರದ ನೇರ ಸಂಪರ್ಕವಿಲ್ಲ. ಒಂದು ಆಂದಾಜು ಪ್ರಕಾರ ಇದರಲ್ಲಿ ಸುಮಾರು 7ಕೋಟಿ ಮನೆಗಳಿಗೆ ಕೇಬಲ್ ಸಂಪರ್ಕವೇ ಇಲ್ಲ.
ಇಸ್ರೋದ ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂವಹನ ಘಟಕ, ಉಪಗ್ರಹಚಾಲಿತ ಪ್ರಸಾರ ಪ್ರಾರಂಭವಾಗಿ 25ನೇ ವರ್ಷ ಸಂದ ಸಂದರ್ಭದಲ್ಲಿ ಹೊರತಂದಿರುವ ಸ್ಮರಣ ಸಂಚಿಕೆಯಲ್ಲಿ ಹೇಳಿರುವಂತೆ ದೇಶದ ಕೇವಲ 3.7ಕೋಟಿ ಮನೆಗಳಿಗೆ ಮಾತ್ರ ಕೇಬಲ್ ಸಂಪರ್ಕವಿದೆ.
ದಿನಕ್ಕೊಂದು ಚಾನಲ್ : ವರದಿಯಲ್ಲಿರುವಂತೆ ಭಾರತದಲ್ಲಿ ವೀಕ್ಷಕರಿಗೆ 90 ಚಾನೆಲ್‌ಗಳು ಲಭ್ಯವಿದ್ದು, ಸ್ಥಳೀಯ ಚಾನೆಲ್‌ಗಳು ಮತ್ತು ದೂರದರ್ಶನದ 20 ಚಾನೆಲ್‌ಗಳು ಸೇರಿ 250ಕ್ಕೂ ಹೆಚ್ಚು ಚಾನೆಲ್‌ಗಳು ಕೆಲಸ ನಿರ್ವಹಿಸುತ್ತಿವೆ. ಇಷ್ಟಲ್ಲದೆ ದಿನಕ್ಕೊಂದರಂತೆ ಹೊಸ ಹೊಸ ಚಾನೆಲ್‌ಗಳು ಹುಟ್ಟಿಕೊಳ್ಳುತ್ತಲೇ ಇವೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಇವುಗಳಲ್ಲಿ ಬಹುತೇಕ ಚಾನೆಲ್‌ಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲವು ಚಾನೆಲ್‌ಗಳು ಆಗಾಗ ಬೇರೆ ಬೇರೆ ಹಸರುಗಳಲ್ಲಿ , ಇಲ್ಲವೇ ಹಳೆಯ ಹೆಸರುಗಳಲ್ಲೇ ಬಂದು ಹೋಗುತ್ತಿರುತ್ತವೆ ಎಂದು ವರದಿ ಹೇಳಿದೆ.
ಈ ಎಲ್ಲಾ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಏಕೈಕ ಸಾಮಾನ್ಯ ಅಂಶ ಎಂದರೆ, ಅವುಗಳೆಲ್ಲವನ್ನು ಭಾರತೀಯರು, ಭಾರತದಲ್ಲಿಯೇ ಚಿತ್ರಿಸಿರುತ್ತಾರೆ. ಇವು ಭಾರತದ ನಿವಾಸಿಗಳನ್ನಷ್ಟೇ ಅಲ್ಲದೆ ಹೊರಗೆ ವಾಸಿಸುವ ಭಾರತೀಯರನ್ನು ಗಮನದಲ್ಲಿಟ್ಟುಕೊಂಡು ಚಿತ್ರಸಿದವುಗಳಾಗಿರುತ್ತವೆ. ಇವುಗಳಲ್ಲಿ ಅನೇಕ ಕಾರ್ಯಕ್ರಮಗಳು ವಿದೇಶಿ ಉಪಗ್ರಹಗಳ ಸಹಾಯದಿಂದ ಅನಿವಾಸಿ ಭಾರತೀಯರಿಗಾಗಿ ಪ್ರಸಾರವಾಗುತ್ತವೆ. ಇನ್ನೂ ಮುಖ್ಯ ವಿಷಯವೆಂದರೆ ಭಾರತದ ಬಹುತೇಕ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಕನಿಷ್ಠ ಮೂರು ಚಾನೆಲ್‌ಗಳಿವೆ.
ಕೇಬಲ್ ಟೀವಿ ಜಾಲ 1984ರಲ್ಲಿ ಆರಂಭವಾಯಿತಾದರೂ ಅದು ಪ್ರಸಿದ್ಧಿಗೆ ಬಂದದ್ದು ಗಲ್ಫ್ ದೇಶಗಳ ನಡುವಿನ ಯುದ್ಧವನ್ನು ಪ್ರಸಾರ ಮಾಡಿದಾಗ. ನಂತರದ ದಿನಗಳಲ್ಲಿ ಬಂದ ಸಿಎನ್‌ಎನ್, ಸ್ಟಾರ್ ಟೀವಿ ಜಾಲಗಳು ಕೇಬಲ್ ಜಾಲ ವಿಸ್ತಾರವಾಗಲು ಕಾರಣವಾದವು.
ಕೇಬಲ್ ಟೀವಿ ಜಾಲಕ್ಕೆ ಹೊಸ ಭಾಷ್ಯ :1992ರಲ್ಲಿ ರಿkುೕ ಟೀವಿ ಜಾಲ ಕೇಬಲ್ ಜಾಲ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ನಂತರ 1993ರಲ್ಲಿ ಅಸ್ಥಿತ್ವಕ್ಕೆ ಬಂದ ಸನ್ ಟಿವಿ , ಕೇಬಲ್ ಟೀವಿ ಜಾಲಕ್ಕೆ ಹೊಸ ಭಾಷ್ಯ ಬರೆಯಿತು. ಸನ್ ಟೀವಿಯವರು ಸ್ಥಾಪಿಸಿದ ಮೊದಲ ತಮಿಳು ಚಾನೆಲ್ ಪ್ರಪಂಚದ ಮೊದಲ ಪ್ರಾದೇಶಿಕ ಚಾನೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದೇ ದಾರಿಯಲ್ಲಿ ಸಾಗಿದ ಆಂಧ್ರದ ಈನಾಡು ಟೀವಿ ದಕ್ಷಿಣ ಭಾರತದ ಕೇಬಲ್ ಟೀವಿ ಜಾಲದ ಭೂಪಟವನ್ನೇ ಬದಲಾಯಿಸಿತು.
1975ರಲ್ಲಿ ಇಸ್ರೋ ದೂರದರ್ಶನ ಪ್ರಸಾರಕ್ಕಾಗಿ ಉಡಾಯಿಸಿದ ಮೊದಲ ಉಪಗ್ರಹದಿಂದ ಪ್ರಸಾರಕಾರ್ಯ ಮೊದಲಾಯಿತು. 1978ರಲ್ಲಿ ಕ್ರಿಕೆಟ್ ಪಂದ್ಯವನ್ನು ಪಾಕಿಸ್ತಾನದಿಂದ ನೇರ ಪ್ರಸಾರ ಮಾಡಲಾಯಿತು. ಮುಂದೆ 1982ರಲ್ಲಿ ಬಣ್ಣದಲ್ಲಿ ಪ್ರಸಾರ ಪ್ರಾರಂಭವಾಯಿತು. ಆಗ ದೆಹಲಿಯಲ್ಲಿ ನಡೆದ ಏಷ್ಯನ್ ಗೇಮ್‌ನ ಆಟೋಟಗಳನ್ನು ನೇರಪ್ರಸಾರ ಮಾಡಲಾಯಿತು. 1982ರಲ್ಲಿ ತನ್ನ ಜಾಲ ವಿಸ್ತರಿಸಲು ತೊಡಗಿದ ದೂರದರ್ಶನ ಎಲ್‌ಪಿಟಿಗಳ ಮೂಲಕ ಕಾರ್ಯಕ್ರಮಗಳ ಮರುಪ್ರಸಾರ ಕೇಂದ್ರಗಳನ್ನು ಸ್ಥಾಪಿಸಿತು. 90ನೇ ದಶಕದಲ್ಲಿ ಬಹಳ ವೇಗವಾಗಿ ಬೆಳೆದ ಉಪಗ್ರಹ ಪ್ರಸಾರ, ಇತ್ತೀಚೆಗೆ ದೂರದರ್ಶನ ಪ್ರಾರಂಭಿಸಿದ ಶೈಕ್ಷಣಿಕ ಚಾನೆಲ್‌ವರೆಗೂ ಬೆಳೆದುಬಂದಿದೆ.
(ಯುಎನ್‌ಐ)
ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ











Click it and Unblock the Notifications