ಬೆಂಗಳೂರಲ್ಲಿ ಮತ್ತೆ 1.25 ಕೋಟಿ ರು. ಮೌಲ್ಯದ ಒಂದಂಕಿ ಲಾಟರಿ ವಶ
ಬೆಂಗಳೂರು : ನಗರ ಅಪರಾಧಿ ವಿಭಾಗದ ಪೊಲೀಸರು ಮತ್ತೆರಡು ಗೋದಾಮುಗಳ ಮೇಲೆ ದಾಳಿ ನಡೆಸಿ, 1.25 ಕೋಟಿ ರುಪಾಯಿ ಮೌಲ್ಯದ ನಕಲಿ ಒಂದಂಕಿ ಲಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಭಾಷ್‌ನಗರದ ದೀಪಕ್ ಎಂಟರ್‌ಪ್ರೆೃಸಸ್ ಹಾಗೂ ಜಯಂತ್ ಎಂಟರ್‌ಪ್ರೆೃಸಸ್ ಲಾಟರಿ ಕೇಂದ್ರಗಳ ಗೋದಾಮುಗಳ ಮೇಲೆ ನಡೆಸಿದ ದಾಳಿಯಿಂದ 1.25 ಕೋಟಿ ರುಪಾಯಿ ಮೌಲ್ಯದ ಲಾಟರಿ ಟಿಕೇಟುಗಳ ಪತ್ತೆಯಾಗಿದೆ. ಮಾಲೀಕರು ತಲೆ ಮರೆಸಿಕೊಂಡಿದ್ದು, ಗೋದಾಮಿನ ನೌಕರರು ಸಿಕ್ಕಿ ಬಿದ್ದಿದ್ದಾರೆ ಎಂದು ಅಪರಾಧ ವಿಭಾಗದ ಡಿಸಿಪಿ ರವೀಂದ್ರ ಪ್ರಸಾದ್ ತಿಳಿಸಿದ್ದಾರೆ.
ಕಳೆದ ಶನಿವಾರ 3 ಗೋದಾಮುಗಳು ಹಾಗೂ 3 ಲಾಟರಿ ಕೇಂದ್ರಗಳಿಗೆ ಪೊಲೀಸರು ದಾಳಿ ನಡೆಸಿ, 2.69 ಕೋಟಿ ರುಪಾಯಿ ಮೌಲ್ಯದ ಲಾಟರಿ ಟಿಕೇಟುಗಳನ್ನು ವಶಪಡಿಸಿಕೊಂಡಿದ್ದು, 13 ಜನರನ್ನು ಬಂಧಿಸಿದ್ದರು. ಒಂದಂಕಿ ಲಾಟರಿಯ ಬೃಹತ್ ಜಾಲ ಇರುವುದು ಕಂಡುಬಂದಿದ್ದು, ಮುಖ್ಯ ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯ ಪ್ರವೃತ್ತರಾಗಿದ್ದಾರೆ.
(ಇನ್ಫೋ ವಾರ್ತೆ)











Click it and Unblock the Notifications