ಕೇಂದ್ರ ಗೃಹ ಕಾ-ರ್ಯ-ದರ್ಶಿ-ಗೆ ಅಬ್ದುಲ್ ಕರೀಂ ನೋಟೀಸು
ಮೈಸೂರು : ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡಾವಳಿಗಳ ನಡುವೆ ತಲೆ ಹಾಕುವಂತೆ ನಾಗರಿಕ ನೀತಿ ಸಂಹಿತೆಯ 80ನೇ ವಿಧಿಯನ್ವಯ ಕೇಂದ್ರ ಗೃಹ ಕಾ-ರ್ಯದರ್ಶಿ-ಗೆ ಅಬ್ದುಲ್ ಕರೀಂ ನೋಟೀಸು ಕೊಟ್ಟಿದ್ದಾರೆ.
ವೀರಪ್ಪನ್ ಗುಂಡಿಗೆ ಬಲಿಯಾದ ಸಬ್ ಇನ್ಸ್‌ಪೆಕ್ಟರ್ ಶಕೀಲ್ ಅಹ್ಮದ್ ತಂದೆ ಕರೀಂ ಖಾನ್ ಅವರ ವಕೀಲ ರಾಮಕೃಷ್ಣ ಕಳುಹಿಸಿರುವ ನೋಟೀಸಿನಲ್ಲಿ , ‘ಉಭಯ ಸರ್ಕಾರಗಳಲ್ಲಿ ಸಂವಿಧಾನಾತ್ಮಕ ಕಾರ್ಯತಂತ್ರಕ್ಕೆ ಚ್ಯುತಿ ಉಂಟಾಗಿದೆ. ವೀರಪ್ಪನ್‌ನನ್ನು ಹಿಡಿಯಲು ಸರ್ಕಾರಗಳು ವಿಫಲವಾಗಿರುವುದು ಒಂದು ದುರಂತ. ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ತಿಳಿಸಿರುವಂತೆ, ರಾಜ್‌ಕುಮಾರ್ ಅಪಹರಣವಾದಾಗಿನಿಂದ ಉಭಯ ರಾಜ್ಯಗಳ ವ್ಯಾಪಾರ- ವಹಿವಾಟಿನಲ್ಲಿ 15 ಸಾವಿರ ಕೋಟಿ ರುಪಾಯಿ ನಷ್ಟವಾಗಿದ್ದು, ಈ ನಷ್ಟ ಮುಂದುವರೆದಿದೆ. ಇಂಥ ಸನ್ನಿವೇಶದಲ್ಲಿ ಸಂವಿಧಾನದ 355ನೇ ವಿಧಿಯನ್ವಯ ಉಭಯ ಸರ್ಕಾರಗಳ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರ ಪ್ರಶ್ನಿಸಬೇಕು ’ ಎಂದು ತಿಳಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯಕ್ಕೆ -ನೀ-ಡಿ-ರು-ವ 60 ದಿನಗಳ ಗಡುವಿನ-ಲ್ಲಿ ಸರ್ಕಾರಗಳು ತಮ್ಮ ಕಾರ್ಯತಂತ್ರದಲ್ಲಿ ಸುಧಾರಣೆ ತರಬೇಕು. ಇಲ್ಲವಾದಲ್ಲಿ ಕಾನೂನು ಅವಕಾಶಗಳನ್ನು ಉಪಯೋಗಿಸಿಕೊಂಡು ಮೈಸೂರು ಕೋರ್ಟಿನಲ್ಲಿ ಗೃಹ ಸಚಿವಾಲಯದ ವಿರುದ್ಧ ಮೊಕದ್ದಮೆ ದಾಖಲು ಮಾಡಬಹುದಾಗಿದೆ ಎಂದು ರಾಮಕೃಷ್ಣ ಹೇಳಿದ್ದಾರೆ.
(ಇನ್ಫೋ ವರದಿ)











Click it and Unblock the Notifications