ಜಗತ್ತಿನ ಅತ್ಯಂತ ಎತ್ತರದ ಹೋಟೆಲ್ ದುಬೈನಲ್ಲಿದೆ
ದುಬೈ : ಪ್ರಪಂಚದ ಅತ್ಯಂತ ಎತ್ತರದ ಹೋಟೆಲ್ ಯಾವುದಿರಬಹುದೆಂದು ತಲೆ ಕೆರೆದುಕೊಳ್ಳುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ದುಬೈನಲ್ಲಿರುವ ಬುರ್ಜ್ ಆಲ್ ಅರಬ್ ಅಥವಾ ಅರೆಬಿಯನ್ ಟವರ್ ಎಂದು ಕರೆಯಲಾಗುವ ಹೋಟೆಲ್ ಅನ್ನು ಜಗತ್ತಿನ ಅತ್ಯಂತ ಎತ್ತರದ ಹೋಟೆಲ್ ಕಟ್ಟಡ ಎಂದು ಹೆಸರಿಸಲಾಗಿದೆ.
2001ನೇ ಇಸವಿಯ ಗಿನ್ನಿಸ್ ಬುಕ್‌ನಲ್ಲಿ ಹೋಟೆಲ್ ಹೆಸರನ್ನು ದಾಖಲು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹಾಯಿ ದೋಣಿಯ ಆಕೃತಿಯಲ್ಲಿರುವ ಈ ಹೋಟೆಲ್ ಆರೇಬಿಯನ್ ಕೊಲ್ಲಿಯಿಂದ 321 ಮೀಟರ್‌ಗಳ ಎತ್ತರದಲ್ಲಿದೆ. ಪ್ಯಾರಿಸ್ಸಿನ ಐಫಲ್ ಟವರ್‌ನಂತೆ ದುಬೈ ಜನರನ್ನು ಆಕರ್ಷಿಸತೊಡಗಿದೆ. ಆದರೆ ಐಫೆಲ್ ಗೋಪುರಕ್ಕಿಂತ ಎತ್ತರವಿದ್ದು, ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ 60 ಮೀಟರ್ ಕಡಿಮೆ ಎತ್ತರವಿದೆ.
280 ಮೀಟರ್ ಉದ್ದವಿರುವ ತೀರಪ್ರದೇಶದಲ್ಲಿ ಮಾನವ ನಿರ್ಮಿತ ದ್ವೀಪದಲ್ಲಿ ಈ ಹೋಟೆಲ್ ತಲೆ ಎತ್ತಿದೆ. ಹೋಟೆಲ್ ತಳದ ಒಟ್ಟು ವಿಸ್ತೀರ್ಣ 111, 480 ಚದುರ ಕಿಲೋಮೀಟರ್‌ಗಳಾಗಿದ್ದು, 202 ಸುಸಜ್ಜಿತ ಮನೆಗಳಿವೆ.
ಇದನ್ನು ರೂಪಿಸಲು 3,500 ವಿನ್ಯಾಸಗಾರರು, ಎಂಜಿನಿಯರ್‌ಗಳು ಮತ್ತು ಕಟ್ಟಡ ಕೆಲಸಗಾರರು ಶ್ರಮಿಸಿದ್ದಾರೆ. ಕಟ್ಟಡದ ತಳಪಾಯಕ್ಕಾಗಿ 3,60,000 ಚದುರ ಮೀಟರ್ ವ್ಯಾಪ್ತಿಗೆ ಕಾಂಕ್ರೀಟ್ ಬಳಸಲಾಗಿದೆ.











Click it and Unblock the Notifications