ನಾಲ್ಕು ವರ್ಷ-ಗ-ಳ-ಲ್ಲಿ ಕೋಟಿ ಗಿಡ -ನೆ-ಡ-ಲು ಸರ್ಕಾ-ರ-ದ ನಿರ್ಧಾ-ರ
ಬೆಂಗಳೂರು :ನೀರಾವರಿ ಇಲಾಖೆಯ ಜಮೀನಿನಲ್ಲಿ ಇನ್ನು ನಾಲ್ಕು ವರ್ಷಗಳೊಳಗೆ ಒಂದು ಕೋಟಿ ಸಸ್ಯ ಬೆಳೆಸಲು ಸರಕಾರ ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಉದ್ಯೋಗಾವಕಾಶವನ್ನು ಹೆಚ್ಚಿಸುವ ಮತ್ತು ಪರಿಸರ ಸಂರಕ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕಳೆದ ಮಾರ್ಚ್‌ನಲ್ಲಿ ಪರಿಸರದ ಸಮಗ್ರ ಅಧ್ಯಯನಕ್ಕಾಗಿ, ಪರಿಸರವಾದಿ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ಮಧ್ಯಂತರ ವರದಿ ಈಗಾಗಲೇ ಸರಕಾರದ ಕೈಸೇರಿದೆ. ಸಮಿತಿಯ ಶಿಫಾರಸ್ಸಿನ ಮೇರೆಗೆ ಕೋಟಿ ಸಸ್ಯ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಲ್ಲದೆ ಈ ಯೋಜನೆಗೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಬ್ಯಾಂಕ್ 120ರಿಂದ 150 ಕೋಟಿ ರುಪಾಯಿ ನೆರವು ನೀಡಲಿದ್ದು, ಯೋಜನೆಯ ನಿರ್ವಹಣೆಗೆ 20 ಮಂದಿಯ ಸಮಿತಿ ರಚಿಸಲಾಗಿದೆ ಎಂದರು.
ರಾಜ್ಯದಲ್ಲಿರುವ ನೀರಾವರಿ ಕಾಲುವೆ ಮತ್ತು ಅಕ್ಕಪಕ್ಕದಲ್ಲಿರುವ ಜಾಗದಲ್ಲಿ ಹಾಗೂ ಆಲಮಟ್ಟಿ, ಹಾರಂಗಿ, ಹೇಮಾವತಿ, ಕಬಿನಿ ಮತ್ತು ಭದ್ರಾ ಜಲಾಶಯ ಯೋಜನೆಯ ಮುಳುಗಡೆ ಪ್ರದೇಶಗಳಲ್ಲಿಯೂ ಗಿಡಗಳನ್ನು ನೆಡಲಾಗುವುದು. ಸುಮಾರು ಒಂದು ಲಕ್ಷ ಕಿಲೋ ಮೀಟರ್ ಉದ್ದದ ರಸ್ತೆಯ ಇಕ್ಕೆಲದಲ್ಲಿಯೂ ಸಸಿ ನೆಡುವ ಉದ್ದೇಶ ಇದೆ.
ಹಣ್ಣು ಹಂಪಲು ಗಿಡ, ಔಷಧೀಯ ಸಸ್ಯ ಮತ್ತು ಕಾಡು ಉತ್ಪನ್ನ ಸಸ್ಯಗಳೂ ಸೇರಿದಂತೆ ಒಟ್ಟು 250 ವಿಧದ ಸಸ್ಯಗಳನ್ನು ಈ ವರ್ಷ ನೆಡಲಾಗುವುದು. ಈ ಸಸಿಗಳನ್ನು ಪೋಷಿಸುವ ಜವಾಬ್ದಾರಿಯನ್ನು ಆಯಾ ಪ್ರದೇಶದ ನೀರು ಬಳಕೆದಾರರ ಸಂಘಕ್ಕೆ ವಹಿಸಲಾಗುವುದು. ಮೊದಲ ಮೂರು ವರ್ಷ ಗಿಡಗಳ ಪಾಲನೆಗೆ , ಕಿಲೋ ಮೀಟರ್‌ಗೆ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ.
(ಇ-ನ್ಫೋ- ವಾರ್ತೆ)











Click it and Unblock the Notifications