ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಗಣತಿಯಲ್ಲಿ ಜಾತಿಯನ್ನು ನಮೂದಿಸಬೇಕು : ಪ್ರಧಾನಿಗೆ ಮೊೖಲಿ ಪತ್ರ

By Staff
|
Google Oneindia Kannada News

ಬೆಂಗಳೂರು : ಬರುವ ಸಾಲಿನ ಫೆಬ್ರವರಿ-ಮಾರ್ಚ್‌ನಲ್ಲಿ ಆರಂಭವಾಗಲಿರುವ ಜನಗಣತಿಯಲ್ಲಿ ಜಾತಿ ಮತ್ತು ಜನಾಂಗವನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊೖಲಿ ಪ್ರಧಾನ ಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಒತ್ತಾಯಿಸಿದ್ದಾರೆ.

ಜನ-ಗ-ಣ-ತಿ ಸಂದ-ರ್ಭ-ದ-ಲ್ಲಿ ಜಾತಿ-ಯ-ನ್ನು ನಮೂ-ದಿ-ಸು-ವ ವಿಷಯವಾಗಿ ಪ್ರಧಾನಿಗಳಿಗೆ ಬರೆದ ಪತ್ರವನ್ನು - ಮೊೖ-ಲಿ ಮಂಗ-ಳ-ವಾ-ರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಜನಗಣತಿಯಲ್ಲಿ ಜಾತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ನಮೂದಿಸುವುದರಿಂದ ಆ ಜಾತಿಯ ಹಿಂದುಳಿದಿರುವಿಕೆಯನ್ನು ನಿರ್ಧರಿಸುವುದು ಸುಲಭವಾಗುತ್ತದೆ, ಹಿಂದುಳಿದ ಜಾತಿ ಮತ್ತು ಜನಾಂಗದ ಅಭಿವೃದ್ಧಿಯ ಬಗ್ಗೆ ವೈಜ್ಞಾನಿಕ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಆಯಾ ಜಾತಿ, ಜನಾಂಗಕ್ಕೆ ಸಂಬಂಧಿಸಿದಂತೆ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿ ಮತ್ತು ಒಂದು ಜಾತಿ ಅಥವಾ ಜನಾಂಗದ ಸಾಮಾಜಿಕ ಬದಲಾವಣೆಯ ಹಂತಗಳು, ಅದರ ಬೆಳವಣಿಗೆಗಳ ಕುರಿತು ವಿಷ್ಲೇಷಣೆ ನಡೆಸುವುದಕ್ಕೂ ಜನಗಣತಿ ವರದಿ ಸಹಕಾರಿಯಾಗುತ್ತದೆ ಎಂದು ಮೊೖಲಿ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಮಂಡಲ ಅಯೋಗ ಶಿಫಾರಸ್ಸುಗಳ ಅಳವಡಿಕೆ, ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸ್ಸಿನ ಅಳವಡಿಕೆ ಹಾಗೂ ಹಿಂದುಳಿದ ಜಾತಿ ಮತ್ತು ಜನಾಂಗದವರಿಗೆ ಮೀಸಲಾತಿ ನೀಡಿಕೆಯ ಸಂದರ್ಭದಲ್ಲಿಯೂ ಜನಗಣತಿ ವರದಿಯಲ್ಲಿ ನಮೂದಾಗುವ ಜಾತಿ ವಿವರಣೆಗಳು ಅಗತ್ಯವಾಗುತ್ತವೆ. ಹಿಂದುಳಿದಿರುವಿಕೆಯನ್ನು ನಿರ್ಧರಿಸುವಲ್ಲಿ ಜಾತಿಯೂ ಒಂದಂಶವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಕೂಡ ಹೇಳಿರುವುದನ್ನು ಮೊೖಲಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X