ಗಿಬ್ಸ್, ವಿಲಿಯಮ್ಸ್ ಈ ವರ್ಷ ಕ್ರಿಕೆಟ್ ಆಡುವಂತಿಲ್ಲ
ಜೊಹಾನ್ಸ್‌ಬರ್ಗ್ : ಡಿಸೆಂಬರ್ 31ರವರೆಗೆ ಕ್ರಿಕೆಟ್ ಆಡಕೂಡದೆಂದು ಹರ್ಷೆಲ್ ಗಿಬ್ಸ್ ಹಾಗೂ ಹೆನ್ರಿ ವಿಲಿಯಮ್ಸ್ ಗೆ ದಕ್ಷಿಣ ಆಫ್ರಿಕದ ಯುನೈಟೆಡ್ ಕ್ರಿಕೆಟ್ ಮಂಡಳಿ ಸೋಮವಾರ ತಾಕೀತು ಮಾಡಿದೆ.
ಮೂವರು ಸದಸ್ಯರ ಶಿಸ್ತು ಸಮಿತಿಯ ಸದಸ್ಯರಾದ ಮೈಕೆಲ್ ಕ್ಯೂಪರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಗಿಬ್ಸ್ 60 ಸಾವಿರ ರ್ಯಾಂಡ್ (ಸುಮಾರು 3.7 ಲಕ್ಷ ರುಪಾಯಿ) ಹಾಗೂ ವಿಲಿಯಮ್ಸ್ 10 ಸಾವಿರ ರ್ಯಾಂಡ್ (ಸುಮಾರು 60 ಸಾವಿರ ರುಪಾಯಿ) ದಂಡವನ್ನು ಅಕ್ಟೋಬರ್ 31ರೊಳಗಾಗಿ ಕಟ್ಟಬೇಕು ಎಂದರು.
ಸಾಮರ್ಥ್ಯಕ್ಕಿಂತ ಕಳಪೆಯಾಗಿ ಆಡಲು ಕ್ರೋನಿಯೆ ಒಡ್ಡಿದ್ದ ಹಣದ ಆಮಿಷಕ್ಕೆ ಒಪ್ಪಿಗೆ ನೀಡಿದ್ದಕ್ಕಾಗಿ ಇಬ್ಬರು ಕ್ರಿಕೆಟಿಗರ ವಿರುದ್ಧ ಮಂಡಳಿ ಈ ಕ್ರಮ ಕೈಗೊಂಡಿದೆ. ಈ ತೀರ್ಮಾನದಿಂದ, ಗಿಬ್ಸ್ ಹಾಗೂ ವಿಲಿಯಮ್ಸ್ ಆಜೀವ ಪರ್ಯಂತ ಕ್ರಿಕೆಟ್ ಆಡದಂತೆ ನಿಷೇಧ ಹೇರುವ ಅನುಮಾನ ಬಗೆಹರಿದಂತಾಗಿದೆ.











Click it and Unblock the Notifications