For Daily Alerts
ಮೆಹಕರ್ ವೃತ್ತದ ಬಳಿ 14 ಹಳ್ಳಿಗಳು ಜಲಾವೃತ
ಬೀದರ್ : ಭಾಲ್ಕೀ ತಾಲೂಕಿನ ಮಾಂಜ್ರಾ ನದಿಯಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಮೆಹಕರ್ ವೃತ್ತದ ಬಳಿಯ 14 ಹಳ್ಳಿಗಳು ನೀರಿನಿಂದ ಆವೃತಗೊಂಡಿವೆ.
ಮಾಂಜ್ರಾ ನದಿಗೆ ಮಹಾರಾಷ್ಟ್ರದ ಧನೇಗಾಂವ್‌ನಲ್ಲಿ ಕಟ್ಟಲಾಗಿರುವ ಅಣೆಕಟ್ಟು ತುಂಬಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ಪ್ರವಾಹ ಉಂಟಾಗಿದೆ. ಮೆಹಕರ್ ವೃತ್ತದ ವಾಂಜರಖೇಡ, ಕೊಂಗಳಿ, ಹಲಸಿ ತೂಂಗಾವ್, ಶ್ರೀಮಾಳಿ, ಅಟ್ಟರಗಾ, ಮಂಜರಗಾ ಮತ್ತು ಗೋಳಿಗಾಂವ್ ಗ್ರಾಮಗಳು ಜಲಾವೃತಗೊಂಡಿರುವುದಾಗಿ ವರದಿಯಾಗಿದೆ.
(ಇನ್ಫೋ ವಾರ್ತೆ)